ಕೊರೊನಾ ವೈರಸ್ ಸಂದಂರ್ಭದಲ್ಲಿ ಲಾಕ್‌ಡೌನ್ ಇರುವ ಕಾರಣ ಮನೆಗಳಲ್ಲೇ ಇರಬೇಕಾಗಿ ಬಂದ ಜನರು ರುಚಿಕಟ್ಟಾಗಿ ಥರಾವರಿ ಖಾದ್ಯಗಳನ್ನು ಮಾಡಿಕೊಂಡು ತಿನ್ನೋದ್ರಲ್ಲಿ ಮಗ್ನರಾಗಿದ್ದಾರೆ ಎಂದು ಬಿಡಿಸಿ ಹೇಳಿಬೇಕಿಲ್ಲ ತಾನೇ?
ಬರೀ ಇದಲ್ಲದೇ, ಆನ್ಲೈನ್ ಮೂಲಕ ಬೇಕಾದ ಆಹಾರವನ್ನು ಆರ್ಡರ್ ಮಾಡಿ ತರಿಸಿಕೊಂಡು ತಿನ್ನುವುದೂ ಸಹ ಮೊದಲಿಗಿಂತ ಹೆಚ್ಚೇ ಆಗಿತ್ತು. ಅಂದ ಹಾಗೆ ಆನ್ಲೈನ್‌ಲ್ಲಿ ಅತ್ಯಂತ ಹೆಚ್ಚು ಆರ್ಡರ್ ಮಾಡಲ್ಪಟ್ಟ ಖಾದ್ಯ ಯಾವುದು ಗೊತ್ತೇ…?
ಲಾಕ್‌ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಆರ್ಡರ್ ಮಾಡಲ್ಪಟ್ಟ ಆಹಾರವೆಂದರೆ ಅದು ಬಿರಿಯಾನಿ ಎಂದು “StatEATistics report: The Quarantine Edition” ಎಂದು ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಮಾಡಿದ ಸರ್ವೇ ಒಂದರಿಂದ ತಿಳಿದುಬಂದಿದೆ. ಈ ಅವಧಿಯಲ್ಲಿ ಜನರ ತಮ್ಮ ಮೆಚ್ಚಿನ ರೆಸ್ಟೋರೆಂಟ್ ಗಳಿಂದ 5.5 ಲಕ್ಷ ಬಾರಿ ಬಿರಿಯಾನಿ ಆರ್ಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.