ಪಕ್ಷಿಯೊಂದು ಅಡುಗೆಮನೆಯ ಸಿಂಕ್ ನಲ್ಲಿ ಸ್ವಚ್ಛಂದವಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲರನ್ನೂ ಸೆಳೆಯುತ್ತಿದೆ.
ವೆಲ್ ಕಮ್ ಟು ನೇಚರ್ ಎಂಬ ಟ್ವಿಟ್ಟರ್ ಪುಟದಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, 55 ಸೆಕೆಂಡಿನ ವಿಡಿಯೋ ಕಂಡು ಅನೇಕರು ರಿಟ್ವೀಟ್ ಕೂಡ ಮಾಡಿದ್ದಾರೆ.
ಈ ಹಕ್ಕಿಗೆ ಯಾವಾಗಲೂ ಸಿಂಕ್ ನಲ್ಲೇ ಸ್ನಾನ ಆಗಬೇಕು ಎನ್ನಲಾಗಿದೆ. ಹಸಿರು, ನೀಲಿ ಮಿಶ್ರಿತ ಪಕ್ಷಿಯ ರೆಕ್ಕೆಪುಕ್ಕಗಳು ಕಂದು ಬಣ್ಣದಿಂದ ಕಂಗೊಳಿಸುತ್ತಿದೆ. ಸಿಂಕ್ ನಲ್ಲಿ ಇದ್ದ ಪ್ಲೇಟ್ ನೊಳಗೆ ಕುಳಿತು, ನಲ್ಲಿಯಲ್ಲಿ ಸಣ್ಣಗೆ ಸುರಿಯುತ್ತಿದ್ದ ನೀರಿಗೆ ಮೈಯೊಡ್ಡಿ, ನೆಂದು ಮಿಂದ ಬಳಿಕ ರೆಕ್ಕೆ ಕೊಡವುದನ್ನು ನೋಡುವುದೇ ಚೆಂದ.
https://twitter.com/welcomet0nature/status/1306702467510329344?ref_src=twsrc%5Etfw%7Ctwcamp%5Etweetembed%7Ctwterm%5E1306702467510329344%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fbird-takes-a-bath-in-kitchen-sink-in-viral-video-so-cute-says-internet-1722942-2020-09-18