ಕೊರೊನಾ ಜೊತೆ ಜೀವನ ಶುರು ಮಾಡಿದ್ದ ಜನರಿಗೆ ಈಗ ಹಕ್ಕಿ ಜ್ವರದ ಭಯ ಶುರುವಾಗಿದೆ. ಹಕ್ಕಿ ಜ್ವರ ಹೆಚ್ಚಾಗ್ತಿದ್ದಂತೆ ಕೋಳಿಗಳಿಗೆ ಬೇಡಿಕೆ ಕಡಿಮೆಯಾಗಿದೆ. ದೇಶದ ಪ್ರಸಿದ್ಧ ಮಾರುಕಟ್ಟೆಗಳಲ್ಲೂ ಕೋಳಿಗಳಿಗೆ ಬೇಡಿಕೆ ಗಣನೀಯವಾಗಿ ಇಳಿದಿದೆ.
ಹೊಟೇಲ್, ಢಾಬಾ ಸೇರಿದಂತೆ ಜನಸಾಮಾನ್ಯರು ಕೂಡ ಕೋಳಿ ಮಾಂಸ ಖರೀದಿಗೆ ಮುಂದಾಗ್ತಿಲ್ಲ. ಇದ್ರಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಕೋಳಿ ಮಾಂಸದ ಬೆಲೆ ಗಣನೀಯವಾಗಿ ಇಳಿಕೆ ಕಂಡಿದೆ.
ದೇಶದ ಪ್ರಸಿದ್ಧ ಚಿಕನ್ ಮಾರುಕಟ್ಟೆಯಲ್ಲಿ ಕೆ.ಜಿ. ಚಿಕನ್ ಬೆಲೆ ನಾಲ್ಕು ದಿನಗಳ ಹಿಂದೆ 90 ರೂಪಾಯಿಯಿಂದ 105 ರೂಪಾಯಿಗೆ ಮಾರಾಟವಾಗ್ತಿತ್ತು. ಆದ್ರೀಗ ಕೆ.ಜಿ. ಚಿಕನ್ ಬೆಲೆ 40 ರೂಪಾಯಿಗೆ ಇಳಿದಿದೆ. ಜನವರಿ 6ರಂದು ಚಿಕನ್ ಬೆಲೆ ಕೆ.ಜಿ.ಗೆ 80 ರೂಪಾಯಿಯಾಗಿತ್ತು. ಜನವರಿ 7ರಂದು ಈ ಬೆಲೆ 60 ರೂಪಾಯಿಗೆ ಕುಸಿದಿತ್ತು. ಇಂದು ಚಿಕನ್ ಬೆಲೆ ಕೆ.ಜಿ.ಗೆ 40 ರೂಪಾಯಿಯಾಗಿದೆ.
ಚಿಕನ್ ಬೆಲೆಗಳು ಇನ್ನೂ ಇಳಿಯುವ ಸಾಧ್ಯತೆಯಿದೆ. ಹಕ್ಕಿ ಜ್ವರದ ಮಧ್ಯೆ ಚಿಕನ್ ಬೆಲೆಯನ್ನು ವ್ಯಾಪಾರಸ್ಥರು ಇಳಿಸಿದ್ದಾರೆ. ಬೆಲೆ ಇಳಿದ್ರೂ ಖರೀದಿ ಮಾಡಲು ಜನರು ಮುಂದೆ ಬರ್ತಿಲ್ಲ.