ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆ ಜನರು ಅದ್ರಿಂದ ರಕ್ಷಣೆ ಪಡೆಯಲು ಬೇರೆ ಬೇರೆ ಮಾರ್ಗ ಹುಡುಕುತ್ತಿದ್ದಾರೆ. ಮನೆ ಮದ್ದಿನ ಜೊತೆಗೆ ಆಯುರ್ವೇದ, ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ತಿದ್ದಾರೆ. ಆದ್ರೆ ಇದು ಎಲ್ಲರಿಗೂ ಸರಿ ಹೊಂದುವುದಿಲ್ಲ. ಇದಕ್ಕೆ ಛತ್ತೀಸ್ಗಢದ ಘಟನೆ ಉದಾಹರಣೆಯಾಗಿದೆ.
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಒಂದೇ ಕುಟುಂಬದ 8 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಹೋಮಿಯೋಪತಿ ಮಾತ್ರೆಯನ್ನು ಇವರೆಲ್ಲ ತೆಗೆದುಕೊಂಡಿದ್ದರು ಎನ್ನಲಾಗಿದೆ. 8 ಮಂದಿ ಸಾವನ್ನಪ್ಪಿದ್ದರೆ 4 ಮಂದಿ ಸ್ಥಿತಿ ಗಂಭೀರವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಮಾತ್ರೆಯಲ್ಲಿ ಆಲ್ಕೋಹಾಲ್ ಪ್ರಮಾಣ ತುಂಬಾ ಹೆಚ್ಚಾಗಿದೆ ಎಂದು ಸಿಎಂಒ ಹೇಳಿದ್ದಾರೆ.
ಆರೋಗ್ಯ ಇಲಾಖೆಯ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆಯ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ. ಆರಂಭಿಕ ತನಿಖೆಯಲ್ಲಿ ಹೋಮಿಯೋಪತಿ ಔಷಧಿ ಸಾವಿಗೆ ಕಾರಣ ಎಂಬುದು ಪತ್ತೆಯಾಗಿದೆ. ಇಡೀ ಕುಟುಂಬ ಹೋಮಿಯೋಪತಿ ಔಷಧಿ ಡ್ರೊಸೆರಾ 30 ಅನ್ನು ತೆಗೆದುಕೊಂಡಿದೆ ಎಂದು ಸಿಎಂಒ ತಿಳಿಸಿದೆ.
ಇದರಲ್ಲಿ ಶೇಕಡಾ 91ರಷ್ಟು ಆಲ್ಕೋಹಾಲ್ ಇರುತ್ತದೆ. ದೇಸಿ ಮದ್ಯವನ್ನು ಸೇರಿಸಲಾಗುತ್ತದೆ. ಇದು ಹೆಚ್ಚು ಅಪಾಯಕಾರಿ ಎಂಬುದು ಸಾಬೀತಾಗಿದೆ. ಕುಟುಂಬಸ್ಥರಿಗೆ ಹೋಮಿಯೋಪತಿ ಔಷಧಿ ನೀಡಿದ ವೈದ್ಯ ನಾಪತ್ತೆಯಾಗಿದ್ದಾನೆ.