ಬಿಹಾರದ ಪೂರ್ನಿಯಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಎಟಿಎಂ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಸಾಮಾನ್ಯವಾಗಿ ತಮ್ಮನ್ನು ನೋಡಲು ಜೈಲಿಗೆ ಬರುವ ಕುಟುಂಬಸ್ಥರು ಖೈದಿಗಳಿಗೆ ದುಡ್ಡು ತಂದು ಕೊಡುತ್ತಾರೆ.
ಈ ಮೂಲಕ ಖೈದಿಗಳನ್ನು ನೋಡಲು ಬರುವ ಅವರ ಕುಟುಂಬಸ್ಥರು ದೊಂಬಿ ಮಾಡುವುದನ್ನು ತಡೆಗಟ್ಟುವುದು ಜೈಲಿನ ಆಡಳಿತ ಸಿಬ್ಬಂದಿಯ ಉದ್ದೇಶವಾಗಿದೆ.
ಖೈದಿಗಳು ಪ್ರತಿನಿತ್ಯ ಎಂಟು ಗಂಟೆಗಳ ಕಾಲ ಕೆಲಸ ಮಾಡಿ 52-103 ರೂ.ಗಳವರೆಗೂ ಸಂಪಾದನೆ ಮಾಡುತ್ತಾರೆ. ಅವರು ಸಂಪಾದಿಸಿದ ದುಡ್ಡನ್ನು ಅವರವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪ್ರತಿಯೊಬ್ಬ ಖೈದಿಯೂ ಸಹ ತನ್ನೊಂದಿಗೆ 500 ರೂ.ಗಳನ್ನು ಇಟ್ಟುಕೊಳ್ಳಬಹುದಾಗಿದೆ. ಈ ಜೈಲಿನಲ್ಲಿರುವ 750 ಖೈದಿಗಳ ಪೈಕಿ 600 ಮಂದಿಗೆ ಬ್ಯಾಂಕ್ ಖಾತೆಗಳಿದ್ದು, 400 ಮಂದಿಗೆ ಎಟಿಎಂ ಕಾರ್ಡ್ ವಿತರಿಸಲಾಗಿದೆ.
ಇತ್ತೀಚೆಗೆ ಕೋವಿಡ್-19 ಸಮಯದಲ್ಲಿ ಖೈದಿಗಳು ಮುಖದ ಮಾಸ್ಕ್‌ಗಳನ್ನು ತಯಾರಿಸಿ ಕೋಸಿ ಹಾಗೂ ಸೀಮಾಂಚಲ ಪ್ರದೇಶಗಳಲ್ಲಿರುವ ಜನರಿಗೆ ವಿತರಿಸಲು ನೆರವಾಗಿದ್ದಾರೆ.