alex Certify ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಿ ಪತಿಯ ಲವ್ವಿ ಡವ್ವಿ: ಮಸಣ ಸೇರಿದ ಹಸೆಮಣೆ ಏರಬೇಕಾದ ಯುವತಿ..!

ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಬೇಕಿದ್ದ 19 ವರ್ಷದ ಯುವತಿಯ ಕುತ್ತಿಗೆಯನ್ನ ಇರಿದು ಕೊಲೆ ಮಾಡಿದ ಘಟನೆ ಬಿಹಾರದ ನಲಂದಾ ಜಿಲ್ಲೆಯ ಥರ್ಥರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟ ಯುವತಿಯ ಮದುವೆ ನೀರಪುರ ಗ್ರಾಮದ ಆಜಾದ್​ ಕುಮಾರ್​ ಜೊತೆ ನಿಶ್ಚಯವಾಗಿತ್ತು. ಆಕೆಯ ಕುಟುಂಬ ಮದುವೆಗೂ ಮುಂಚಿತವಾಗಿ ವರನ ಕುಟುಂಬಕ್ಕೆ 4 ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಹಣವನ್ನ ನೀಡಿತ್ತು. ಆದರೆ ಮದುವೆಗೂ ಮುನ್ನವೇ ಈಕೆಯನ್ನ ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಥರ್ಥರಿ ಪೊಲೀಸ್​​ ಠಾಣೆಯ ಸಿಬ್ಬಂದಿ ಎಸ್​ ಪವನ್​, ರುಂಡ ಬೇರ್ಪಟ್ಟ ಯುವತಿಯ ಮೃತದೇಹ ಹಳ್ಳಿಯಲ್ಲಿ ಪತ್ತೆಯಾಗಿದೆ. ಆಕೆಯ ಕೈ ಹಾಗೂ ಕಾಲುಗಳನ್ನ ಕಟ್ಟಲಾಗಿತ್ತು ಎಂದು ಹೇಳಿದ್ದಾರೆ.

ಆಕೆ ಮದುವೆಯಾಗಬೇಕಿದ್ದ ವರನ ಲವ್​​ ಅಫೇರ್​ನಿಂದಾಗಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮದುವೆ ನಿಶ್ಚಯವಾಗಿದ್ದರೂ ಸಹ ಅಜಾದ್​ ಬೇರೊಂದು ಹುಡುಗಿ ಜೊತೆ ಲವ್ವಿ ಡವ್ವಿ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಮತ್ತೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಉನ್ನಾವ್​ ಜಿಲ್ಲೆಯಲ್ಲಿ ಗರ್ಭಿಣಿ ತನ್ನ ಪತಿಯ ಅಕ್ರಮ ಸಂಬಂಧವನ್ನ ಪ್ರಶ್ನೆ ಮಾಡಿದ ಕಾರಣಕ್ಕೆ ಆಕೆಯನ್ನ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ವರದಿಗಳ ಪ್ರಕಾರ ಮೃತ ಮಹಿಳೆ 9 ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ಈಕೆಗೆ ಅಸಮಾಧಾನವಿತ್ತು.

ವೈದ್ಯಕೀಯ ತಪಾಸಣೆಗೆಂದು ಪತ್ನಿಯನ್ನ ಉನ್ನಾವೋದ ಆಲಂನಗರ ಪ್ರದೇಶದ ಏಕಾಂತ ಸ್ಥಳಕ್ಕೆ ಕರೆದೊಯ್ದ ಪತಿ ಆಕೆಯನ್ನ ಜೀವಂತವಾಗಿ ಸುಟ್ಟು ಹಾಕಿದ್ದಾನೆ. ಮಾರನೇ ದಿನ ಬೆಳಗ್ಗೆ ಕೆಲ ಸ್ಥಳೀಯರು ಮೃತದೇಹವನ್ನ ಕಂಡ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...