ಬಿಹಾರ ಚುನಾವಣೆಗೆ ದಿನಗಣನೆ ಶುರುವಾಗಿದೆ . 2015ರಲ್ಲಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಉಳಿದ ಪಕ್ಷಗಳಿಗಿಂತ 117 ಕೋಟಿಗಿಂತ ಹೆಚ್ಚು ರೂಪಾಯಿಯನ್ನ ಪ್ರಚಾರಕ್ಕೆ ಬಳಕೆ ಮಾಡಿದೆ.
2015ರ ಚುನಾವಣೆಯಲ್ಲಿ ಬಿಜೆಪಿ 135 ಕೋಟಿ ರೂಪಾಯಿಯನ್ನ ಪ್ರಚಾರಕ್ಕೆ ಬಳಸಿಕೊಂಡಿದ್ದರೆ ಕಾಂಗ್ರೆಸ್, ಜೆಡಿ(ಯು), ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿ ಖರ್ಚು ಮಾಡಿದ ಹಣವನ್ನ ಒಟ್ಟುಗೂಡಿಸಿದ್ರೂ 20 ಕೋಟಿ ರೂಪಾಯಿ ದಾಟಿಲ್ಲ. ಈ ಎಲ್ಲ ಪಕ್ಷಗಳಿಗಿಂದ ಬಿಜೆಪಿ 72.9 ಪ್ರತಿಶತದಷ್ಟು ಅಧಿಕ ಹಣವನ್ನ ಖರ್ಚು ಮಾಡಿದೆ.
ಕಾಂಗ್ರೆಸ್ ಪಕ್ಷ ಪ್ರಚಾರಕ್ಕಾಗಿ 18 ಕೋಟಿ ರೂಪಾಯಿ ವ್ಯಯಿಸಿದೆ. ಜೆಡಿ(ಯು) 13 ಕೋಟಿ ಹಾಗೂ ಬಿಎಸ್ಪಿ 4 ಕೋಟಿ ರೂಪಾಯಿಯನ್ನ ಚುನಾವಣಾ ಕ್ಯಾಂಪೇನ್ಗಾಗಿ ವ್ಯಯ ಮಾಡಿದೆ. ಈ ಮೂಲಕ ಎಲ್ಲ ಪಕ್ಷಗಳು 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 190 ಕೋಟಿ ರೂಪಾಯಿ ಖರ್ಚು ಮಾಡಿವೆ.
ಚುನಾವಣಾ ಕ್ಯಾಂಪೇನ್ನಲ್ಲಿ ಬಿಜೆಪಿ ಪ್ರಚಾರ, ಪ್ರಯಾಣ ವೆಚ್ಚ, ಅಭ್ಯರ್ಥಿಗಳಿಗೆ ಹಣ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಣ ಖರ್ಚು ಮಾಡಿದೆ. ಪ್ರಚಾರ ಕಾರ್ಯಕ್ಕೆಂದೇ ಬಿಜೆಪಿ 60 ಕೋಟಿ ರೂಪಾಯಿ ಮೀಸಲಿಟ್ಟಿದೆ. 40 ಕೋಟಿ ರೂಪಾಯಿ ಮೀಡಿಯಾ ಜಾಹೀರಾತಿಗೆ, 10 ಕೋಟಿ ಕಟೌಟ್ ಬ್ಯಾನರ್ ಸೇರಿದಂತೆ ಪ್ರಚಾರದ ಬಳಸಲ್ಪಡುವ ವಸ್ತುಗಳಿಗೆ ಹಾಗೂ 9 ಕೋಟಿ ರೂಪಾಯಿಯನ್ನ ಸಾರ್ವಜನಿಕ ಸಭೆಗಾಗಿ ವ್ಯಯಿಸಿದೆ.