
ತನ್ನ ಮೊದಲ ಕಾರಿನ ಪ್ರೀತಿಯನ್ನು ವ್ಯಕ್ತಪಡಿಸಲು ಬಿಹಾರದಲ್ಲಿ ವ್ಯಕ್ತಿಯೊಬ್ಬರು ತನ್ನ ಮನೆ ಟೆರಸ್ ಮೇಲೆ ಮಹೀಂದ್ರಾ ಸ್ಕಾರ್ಪಿಯೋ ಶೈಲಿಯ ವಾಟರ್ ಟ್ಯಾಂಕ್ ನಿರ್ಮಿಸಿದ್ದಾರೆ.
ಭಾಗಲ್ಪುರದ ನಿವಾಸಿ ಇಂಟಾಸಾರ್ ಆಲಂ ಅವರು ತಮ್ಮ ಮೊದಲ ಕಾರ್ ಆಗಿ ಮಹೀಂದ್ರಾ ಸ್ಕಾರ್ಪಿಯೋವನ್ನು ಖರೀದಿಸಿದ್ದರು. ಅದರ ಮೇಲೆ ಅಪಾರ ಪ್ರೀತಿ ಹೊಂದಿದ್ದರಿಂದ ನಾಲ್ಕು ಮಹಡಿಯ ಮನೆಯ ಮೇಲೆ ಅದರ ಕುರುಹನ್ನು ಸ್ಥಾಪಿಸಲು ನಿರ್ಧರಿಸಿದರಂತೆ.
ಕಾರ್ ಮಾದರಿಯ ಟ್ಯಾಂಕ್ ನಿಜವಾದ ವಾಹನವನ್ನು ಹೋಲುತ್ತದೆ. ಮಾತ್ರವಲ್ಲದೆ ಇಂಟಾಸಾರ್‌ನ ಎಸ್‌ಯುವಿಯಂತೆಯೇ ಒಂದೇ ನಂಬರ್ ಪ್ಲೇಟ್ ಅನ್ನು ಸಹ ಹೊಂದಿದೆ.
ಆಗ್ರಾದಿಂದ ಕಾರ್ಮಿಕರನ್ನು ಕರೆತಂದು ಸುಮಾರು 2.5 ಲಕ್ಷ ರೂ.ಗಳ ಹೂಡಿಕೆ ಮಾಡಿ ಅದನ್ನು ನಿರ್ಮಿಸಲಾಗಿದೆ.