ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಆರ್.ಜೆ.ಡಿ. ನೇತೃತ್ವದ ಮಹಾ ಮೈತ್ರಿಕೂಟ ಪಕ್ಷಗಳ ನಡುವೆ ಸೀಟು ಹಂಚಿಕೆಯಾಗಿದೆ.
144 ಕ್ಷೇತ್ರಗಳನ್ನು ಆರ್.ಜೆ.ಡಿ.ಗೆ ಬಿಟ್ಟುಕೊಡಲಾಗಿದ್ದು, ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಸ್ಪರ್ಧಿಸಲಿದ್ದಾರೆ. ಬಿಹಾರದ 243 ಕ್ಷೇತ್ರಗಳಲ್ಲಿ 144 ರಲ್ಲಿ ಆರ್.ಜೆ.ಡಿ., 70 ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದ್ದು ಇತರೆ ಮೈತ್ರಿ ಪಕ್ಷಗಳಿಗೆ 29 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.
ಬಿಜೆಪಿ – ಜೆಡಿಯು ಮೈತ್ರಿಕೂಟದ ವಿರುದ್ಧ ಮಹಾ ಮೈತ್ರಿಕೂಟ ಚುನಾವಣೆ ಎದುರಿಸುತ್ತಿದ್ದು ಕೃಷಿ ಸಂಬಂಧಿತ ಕಾಯ್ದೆ ವಿಚಾರ, ಕಾರ್ಮಿಕರ ಸಮಸ್ಯೆ, ಕೊರೋನಾ ವಿಚಾರ ಮೊದಲಾದವುಗಳನ್ನು ಆಧರಿಸಿ ಚುನಾವಣೆ ನಡೆಸಲಾಗುವುದು. ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಬಿಹಾರದ 243 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.