ಪರೀಕ್ಷೆಯಲ್ಲಿ ಪಾಸ್ ಆಗಬೇಕು ಅಂದರೆ ವಿದ್ಯಾರ್ಥಿಗಳು ಪಡೋ ಸಾಹಸ ಒಂದೆರಡಲ್ಲ. ಕಾಪಿ ಚೀಟಿಯಿಂದ ಹಿಡಿದು ಉತ್ತರ ಪತ್ರಿಕೆಯಲ್ಲಿ ಹಣ ಇಟ್ಟು ಶಿಕ್ಷಕರಿಗೆ ಆಮಿಷವೊಡ್ಡುವವರೆಗೂ ಹಲವಾರು ರೀತಿಯ ಘಟನೆಗಳ ಬಗ್ಗೆ ಕೇಳಿದ್ದೇವೆ.
ಇದೀಗ ಬಿಹಾರದಲ್ಲಿ ಇಂತಹದ್ದೇ ಇನ್ನೊಂದು ಘಟನೆ ಬೆಳಕಿಗೆ ಬಂದಿದ್ದು, ಇದರಲ್ಲಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯಲ್ಲಿ ನೀವು ಪಾಸ್ ಮಾಡದೇ ಇದ್ದರೆ ನನ್ನ ಮದುವೆ ನಿಂತು ಹೋಗುತ್ತೆ ಎಂದು ಗೋಗರೆದಿದ್ದಾಳೆ.
ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿನಿ, ನನ್ನ ಮದುವೆ ಮೇ 26ರಂದು ನಿಶ್ಚಯವಾಗಿದೆ. ಒಂದು ವೇಳೆ ನಾನು ಅನುತ್ತೀರ್ಣಳಾದರೆ ಪರಿಣಾಮ ಏನಾಗುತ್ತೋ ನನಗೆ ತಿಳಿದಿಲ್ಲ. ಹೀಗಾಗಿ ದಯಮಾಡಿ ನನ್ನನ್ನ ಪಾಸ್ ಮಾಡಿ. ನನಗೆ ಅನಾರೋಗ್ಯವಿದ್ದ ಕಾರಣ ಸರಿಯಾಗಿ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ ಎಂದು ಅಲವತ್ತುಕೊಂಡಿದ್ದಾಳೆ.
ಹೀಗಾಗಿ ನಿಮ್ಮದೇ ಮಗಳು ಎಂದುಕೊಂಡು ನನಗೆ ಒಳ್ಳೆಯ ಅಂಕಗಳನ್ನ ನೀಡಿ. ನಾನು ತುಂಬಾ ಬಡತನದ ಕುಟುಂಬಕ್ಕೆ ಸೇರಿದವಳು. ನಿಮಗೂ ಮಗಳಿದ್ದರೆ ದಯಮಾಡಿ ನನ್ನನ್ನ ಅರ್ಥ ಮಾಡಿಕೊಳ್ಳಿ ಎಂದು ಬರೆಯಲಾಗಿದೆ.