ಬಿಗ್ ಬಾಸ್ ಸೀಸನ್ 14ರ ವೇಳೆ ಸ್ಫರ್ಧೆಯಲ್ಲಿದ್ದ ಪ್ರತಿಯೊಬ್ಬ ಅಭ್ಯರ್ಥಿಯೂ ಸಹ ತನ್ನ ಪ್ರೀತಿಪಾತ್ರರನ್ನು ಮುಖತಃ ಅಥವಾ ವಿಡಿಯೋ ಕಾಲ್ ಮೂಲಕ ಭೇಟಿ ಮಾಡಲು ಅವಕಾಶ ಪಡೆದುಕೊಂಡಿದ್ದರು.
ಶೋಗೆ ಚಾಲೆಂಜರ್ ಆಗಿ ಎಂಟ್ರಿ ಕೊಟ್ಟ ರಾಖಿ, ವಿಡಿಯೋ ಕಾಲ್ ಮೂಲಕ ತನ್ನ ತಾಯಿಯೊಂದಿಗೆ ಮಾತನಾಡುವ ಅವಕಾಶ ಪಡೆದುಕೊಂಡಿದ್ದರು. ತಮ್ಮ ಮಗಳೊಂದಿಗೆ ಮಾತನಾಡಿದ ರಾಖಿ ತಾಯಿ ಜಯಾ ಸಾವಂತ್, ಕ್ಯಾನ್ಸರ್ ಗಡ್ಡೆಯೊಂದನ್ನು ತೆರೆಯಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ತಮ್ಮ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆಗಲಿಲ್ಲ ಎಂದ ಜಯಾ, “ಆಕೆಗೆ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ವಿಷಾದವಿದೆ. ಆದರೆ ನಾವು ಅಸಹಾಯಕರಾಗಿದ್ದೆವು. ನಾವು ಬಹಳ ಕೆಟ್ಟ ಪ್ರದೇಶದಲ್ಲಿ ಬದುಕಿದ್ದು, ನಮ್ಮ ಬಳಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಣವೇ ಇರಲಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ನಾವು ಹೆಚ್ಚು ಹೇಳಲು ಆಗುವುದಿಲ್ಲ” ಎಂದಿದ್ದಾರೆ. ಇದೇ ವೇಳೆ ತಮ್ಮ ಇಡೀ ಕುಟುಂಬವನ್ನು ರಾಖಿ ಪೊರೆಯುತ್ತಿರುವುದಾಗಿ ಜಯಾ ತಿಳಿಸಿದ್ದಾರೆ.