ರಾಷ್ಟ್ರೀಯ ಭೂಕಂಪಶಾಸ್ತ್ರ ಇದೀಗ ಇಡೀ ದೇಶವನ್ನು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಮಾಹಿತಿಯಲ್ಲಿ ದೇಶದ ವಿವಿಧ ಭಾಗದಲ್ಲಿ ಮಾರ್ಚ್ 1ರಿಂದ ಸೆ.8ರವರೆಗೆ ಬರೋಬ್ಬರಿ 413 ಭಾರಿ ಭೂಮಿ ಕಂಪಿಸಿದೆ ಎಂದು ಹೇಳಿದೆ.
ರಾಜ್ಯಸಭೆಯಲ್ಲಿ ಕೇಳಿರುವ ಪ್ರಶ್ನೆಯೊಂದಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವಾಲಯ ಉತ್ತರಿಸಿದ್ದು, ಏಳು ತಿಂಗಳ ಅಂತರದಲ್ಲಿ 413 ಬಾರಿ ಭೂಕಂಪಿಸಿರುವ ಮಾಹಿತಿ ದಾಖಲಾಗಿದೆ. ಈ 413ರಲ್ಲಿ 135 ಭೂಕಂಪದ ಮ್ಯಾಗ್ನಿಟೂಡ್ 3.0ಕ್ಕಿಂತ ಕಡಿಮೆ ದಾಖಲಾಗಿದೆ. ಹೀಗಾಗಿ ಸಹಜವಾಗಿ ಜನರಿಗೆ ತಿಳಿಯುವುದಿಲ್ಲ. ಇನ್ನುಳಿದಂತೆ 153 ಬಾರಿ 3.0 ರಿಂದ 3.9ರ ಅಂತರದಲ್ಲಿ ದಾಖಲಾಗಿದೆ. ಇದರಿಂದ ಸಣ್ಣ ಪ್ರಮಾಣದ ಕಂಪನವಾಗಲಿದೆ ಎಂದು ಉತ್ತರಿಸಿದೆ.
ಇನ್ನುಳಿದಂತೆ 114 ಬಾರಿ 4.0ರಿಂದ4.9ರವರೆಗೆ ಇರಲಿದ್ದು, ಕೊಂಚ ಪ್ರಮಾಣದ ಹಾನಿಯಾಗುವ ಸಾಧ್ಯತೆಯಿರಲಿದೆ. ಆದರೆ 5ಕ್ಕಿಂತ ಹೆಚ್ಚು ಮ್ಯಾಗ್ನಿಟ್ಯೂಡ್ನಲ್ಲಿ 11 ಬಾರಿ ಭೂಕಂಪ ಸಂಭವಿಸಿದ್ದು, ಇದು ಹೆಚ್ಚು ಹಾನಿ ಮಾಡುವ ಸಾಧ್ಯತೆಯಿರಲಿದೆ ಎಂದು ವಿವರಿಸಲಾಗಿದೆ.