ಪುಣೆ: ಸೀರಮ್ ಇನ್ಸ್ ಟಿಟ್ಯೂಟ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪುಣೆಯ ಸೀರಮ್ ಇನ್ಸ್ ಟಿಟ್ಯೂಟ್ ನ ಹೊಸ ಘಟಕದಲ್ಲಿ ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ಸಂಭವಿಸಿದ ಬೆಂಕಿ ದುರಂತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಕಟ್ಟಡದ ತುಂಬ ದಟ್ಟ ಹೊಗೆ ಆವರಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಸದ್ಯ ಐವರ ಮೃತ ದೇಹ ಹೊರತೆಗೆಯಲಾಗಿದ್ದು, ಮಂಜರಿ ಕಾಂಪ್ಲೆಕ್ಸ್ ನಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಪುಣೆ ಡಿಸಿ ರಾಜೇಶ್ ದೇಶ್ ಮುಖ್ ತಿಳಿಸಿದ್ದಾರೆ.
ಇನ್ನು ಅಗ್ನಿ ಆಕಸ್ಮಿಕ ಕೊವಿಶೀಲ್ಡ್ ಲಸಿಕಾ ತಯಾರಿಕೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಮೊದಲು ನಮಗೆ ಜನರ ಆರೋಗ್ಯ ಮುಖ್ಯ ಎಂದು ಸಂಸ್ಥೆ ತಿಳಿಸಿದೆ.