ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿರುವ ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಸಚಿನ್ ಪೈಲಟ್ ಬಣಕ್ಕೆ ರಾಜಸ್ಥಾನದ ಹೈಕೋರ್ಟ್‌ನಿಂದ ಸ್ವಲ್ಪ ನೆಮ್ಮದಿ ಸಿಕ್ಕಿದೆ. ವಿಧಾನಸಭೆ ಸ್ಪೀಕರ್ ನೀಡಿದ ನೋಟಿಸನ್ನು ತಡೆಹಿಡಿಯಲಾಗಿದೆ. ಅಂದರೆ ವಿಧಾನಸಭಾ ಸ್ಪೀಕರ್, ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಾಗುವುದಿಲ್ಲ.
ಹಾಗೆ ಕೇಂದ್ರ ಸರ್ಕಾರವನ್ನು ಈ ವಿಷಯದಲ್ಲಿ ಪಕ್ಷವನ್ನಾಗಿ ಮಾಡುವಂತೆ ಸಚಿನ್ ಪೈಲಟ್ ಸಮೂಹ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಅಂಗೀಕರಿಸಿದೆ. ಕೇಂದ್ರ ಸರ್ಕಾರದ ಅಭಿಪ್ರಾಯವನ್ನೂ ಈಗ ಕೇಳಲಾಗುವುದು. ಹಾಗಾಗಿ ಹೈಕೋರ್ಟ್, ಸ್ಪೀಕರ್ ನೋಟಿಸ್ಗೆ ತಡೆ ನೀಡಿದೆ. ಹೈಕೋರ್ಟ್ ಈ ವಿಷ್ಯದ ಬಗ್ಗೆ ಇನ್ನೂ ಅಂತಿಮ ಆದೇಶ ನೀಡಿಲ್ಲ.
ಅನರ್ಹತೆಗೆ ಸಂಬಂಧಿಸಿದಂತೆ ವಿಧಾನಸಭಾ ಸ್ಪೀಕರ್ ಸಿ.ಪಿ.ಜೋಶಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಪೈಲಟ್ ಮತ್ತು ಅವರ ಬಣದ ಶಾಸಕರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ತೀರ್ಪು ಪ್ರಕಟಿಸುವುದಾಗಿ ಹೈಕೋರ್ಟ್ ಹೇಳಿತ್ತು. ಆದ್ರೆ ಹೈಕೋರ್ಟ್ ತೀರ್ಪು ನೀಡಬಾರೆಂದು ಸ್ಪೀಕರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿತ್ತು. ಸದ್ಯ ಇಡೀ ಪ್ರಕರಣ ಸುಪ್ರೀಂನಲ್ಲಿದ್ದು, ಯಾವುದೇ ಪಕ್ಷ ಯಾವುದೇ ಕ್ರಮಕೈಗೊಳ್ಳುವಂತಿಲ್ಲ.