ದೆಹಲಿ-ಎನ್.ಸಿ.ಆರ್. ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಾತಾವಣ ಮಲಿನಗೊಳಿಸುವವರು ಎಚ್ಚರದಿಂದಿರಿ. ವಾಯ ಮಾಲಿನ್ಯ ಮಾಡುವವರ ವಿರುದ್ಧ 5 ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಲ್ಲದೆ 5 ವರ್ಷದವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.
ಹೆಚ್ಚುತ್ತಿರುವ ವಾಯುಮಾಲಿನ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದಕ್ಕಾಗಿ ಕೇಂದ್ರ ಆಯೋಗವನ್ನು ರಚಿಸಿದೆ. ಇದ್ರಲ್ಲಿ ಇಸ್ರೋ ಪ್ರತಿನಿಧಿಗಳು ಸೇರಿರುತ್ತಾರೆ.
ದೆಹಲಿ-ಎನ್‌ಸಿಆರ್, ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಯುಪಿ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಆಯೋಗವನ್ನು ರಚಿಸಿದೆ. ಈ ಆಯೋಗವು ವಾಯುಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆ ನೀಡಲಿದೆ. ಕೆಲಸದ ಮೇಲ್ವಿಚಾರಣೆ ಮಾಡಲಿದೆ. ಮಾಲಿನ್ಯ ನಿಯಂತ್ರಣಕ್ಕೆ ಅನೇಕ ಅಭಿಯಾನಗಳನ್ನು ನಡೆಸಲಾಗ್ತಿದೆ. ಆದ್ರ ಅದ್ರಲ್ಲೂ ಕೆಲ ದೋಷಗಳು ಕಂಡು ಬಂದಿರುವ ಕಾರಣ ದೆಹಲಿ ಸರ್ಕಾರ ಗ್ರೀನ್ ದೆಹಲಿ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ದೀಪಾವಳಿ ಹತ್ತಿರವಾಗ್ತಿರುವ ಕಾರಣ ದೆಹಲಿ ಸರ್ಕಾರ ಈ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ತೆಗೆದುಕೊಳ್ತಿದೆ.