ಮಾರ್ಚ್ 13ರಂದು ನವದೆಹಲಿ – ಡೆಹ್ರಾಡೂನ್ ನಡುವಣ ಸಂಚಾರ ನಡೆಸುವ ಶತಾಬ್ದಿ ಎಕ್ಸ್ಪ್ರೆಸ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಳಿಕ ತನಿಖೆ ನಡೆಸಿದ್ದ ರೈಲ್ವೆ ಇಲಾಖೆ, ಪ್ರಯಾಣಿಕರೊಬ್ಬರು ಬೀಡಿ ಅಥವಾ ಸಿಗರೇಟ್ ಸೇದಿ ಶೌಚಾಲಯದ ಕಸದ ಬುಟ್ಟಿಗೆ ಎಸೆದ ವೇಳೆ ಅದರಲ್ಲಿದ್ದ ಟಿಶ್ಯೂ ಪೇಪರ್ ಗೆ ಬೆಂಕಿ ಹೊತ್ತಿಕೊಂಡು ಈ ಪ್ರಕರಣ ಸಂಭವಿಸಿದೆ ಎಂಬುದನ್ನು ಕಂಡುಕೊಂಡಿದೆ.
ಈ ಹಿನ್ನಲೆಯಲ್ಲಿ ರೈಲಿನಲ್ಲಿ ಧೂಮಪಾನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ರೈಲ್ವೆ ಇಲಾಖೆ ಅಂತಹ ಪ್ರಯಾಣಿಕರನ್ನು ಬಂಧಿಸುವುದರ ಜೊತೆಗೆ ಭಾರಿ ಮೊತ್ತದ ದಂಡ ವಿಧಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪಿಯು ಪರೀಕ್ಷೆ ಕುರಿತಂತೆ ಇದೇ ಮೊದಲ ಬಾರಿಗೆ ಕೈಗೊಳ್ಳಲಾಗಿದೆ ಈ ‘ತೀರ್ಮಾನ’
ರೈಲ್ವೆ ಕಾಯ್ದೆಯ ಸೆಕ್ಷನ್ 167 ರ ಪ್ರಕಾರ ರೈಲಿನಲ್ಲಿ ಧೂಮಪಾನ ಮಾಡುವ ಪ್ರಯಾಣಿಕರಿಗೆ ನೂರು ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶವಿದ್ದು, ಇದೀಗ ಈ ಮೊತ್ತವನ್ನು ಏರಿಕೆ ಮಾಡಲಾಗುತ್ತದೆ. ಇದರ ಜೊತೆಗೆ ಅಂತಹ ಪ್ರಯಾಣಿಕರನ್ನು ಬಂಧನಕ್ಕೊಳಪಡಿಸಲು ಸಹ ಚಿಂತನೆ ನಡೆಸಲಾಗಿದೆ.