ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೊಸ ದಾಖಲೆ ಬರೆಯುತ್ತಿದೆ. ಒಂದೇ ದಿನದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದಾರೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವಾರಿಯರ್ಸ್, ಸೋಂಕಿತರ ಜೀವ ಉಳಿಸಬೇಕಾದ ವೈದ್ಯರೇ ಕೋವಿಡ್ ಗೆ ತುತ್ತಾಗುತ್ತಿದ್ದಾರೆ.
ಇತ್ತೀಚಿನ ವರದಿ ಪ್ರಕಾರ ದೆಹಲಿಯೊಂದರಲ್ಲೇ 650ಕ್ಕೂ ಹೆಚ್ಚು ವೈದ್ಯರು ಹಾಗೂ ನರ್ಸ್ ಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಮ್ ಮನೋಹರ್ ಲೋಹಿಯಾ ಮತ್ತು ಏಮ್ಸ್ ಆಸ್ಪತ್ರೆಯಲ್ಲೇ ಹೆಚ್ಚು ಸೋಂಕಿತರಿದ್ದಾರೆ. ಆರ್ ಎಂಎಲ್ ಆಸ್ಪತ್ರೆಯ 800 ಸಿಬ್ಬಂದಿಗಳ ಪೈಕಿ 210 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
BIG NEWS: ಕೊರೊನಾ ಮಹಾಸ್ಫೋಟ; ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ಕೋವಿಡ್ ಕೇಸ್ ಪತ್ತೆ; 24 ಗಂಟೆಯಲ್ಲಿ 3,523 ಜನ ಬಲಿ
ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳೇ ಕೋವಿಡ್ ನಿಂದ ಬಳಲುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ವೈದರ ಕೊರತೆ ಎದುರಾಗಿದೆ. ಇನ್ನೊಂದೆಡೆ ದಿನಕ್ಕೆ 14-18 ಗಂಟೆಗಳ ಕಾಲ ಸತತವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಾನಸಿಕ ಒತ್ತಡಕ್ಕೆ ಸಿಲುಕುತ್ತಿದ್ದಾರೆ ಎನ್ನಲಾಗಿದೆ.