
ದೇಶದ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಕಾನೂನು ಜಾರಿಗೆ ತರ್ತಿದೆ. ಇದರ ಅಡಿಯಲ್ಲಿ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ರಸ್ತೆ ನಿರ್ಮಾಣ ಮಾಡಿದ ಕಂಪನಿಯನ್ನು ತಪ್ಪಿತಸ್ಥರೆಂದು ಪರಿಗಣಿಸಲ್ಪಡುತ್ತದೆ. ಇದರೊಂದಿಗೆ ನಿರ್ಮಾಣ ಕಂಪನಿ-ಗುತ್ತಿಗೆದಾರನಿಗೆ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.
ಅಪಘಾತಕ್ಕೆ ಸಂಬಂಧಿಸಿದ ಎಂಜಿನಿಯರ್‌ಗಳು, ಸಲಹೆಗಾರರು, ಮಧ್ಯಸ್ಥಗಾರರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ 2020 ರ ಸೆಕ್ಷನ್ 198-ಎ ನಲ್ಲಿ ಈ ನಿಯಮ ಜಾರಿಗೆ ಬರ್ತಿದೆ. ಈ ನಿಯಮವು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗೆ ಅನ್ವಯವಾಗಲಿದೆ.
ರಸ್ತೆ ಅಪಘಾತದ ಸಂದರ್ಭದಲ್ಲಿ ನೆರವಿಗೆ ಬರುವವರಿಗೆ ನೆಮ್ಮದಿ ಸಿಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ರಕ್ಷಣೆ ನಿಯಮ ರೂಪಿಸಿದೆ. ಸಹಾಯಕ ವ್ಯಕ್ತಿ ತನ್ನ ಗುರುತನ್ನು ಹೇಳುವಂತೆ ಪೊಲೀಸರು ಒತ್ತಡ ಹೇರುವಂತಿಲ್ಲ. ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ -2019 ರಲ್ಲಿ ಸರ್ಕಾರ ಹೊಸ ಸೆಕ್ಷನ್ 134 (ಎ) ಸೇರಿಲಾಗಿದೆ.
ಸಹಾಯ ಮಾಡುವ ಜನರನ್ನು ಗೌರವದಿಂದ ನೋಡಬೇಕು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ. ಧರ್ಮ, ರಾಷ್ಟ್ರೀಯತೆ, ಜಾತಿ ಮತ್ತು ಲಿಂಗಗಳ ಬಗ್ಗೆ ಅವರೊಂದಿಗೆ ಯಾವುದೇ ತಾರತಮ್ಯ ಇರಬಾರದು ಎಂದಿದೆ.