ನವದೆಹಲಿ: ವೈದ್ಯಕೀಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನೇತೃತ್ವದಲ್ಲಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಭಾವಿ ಅಳಿಯನ ಸಂಪಾದನೆ ತಿಳಿದುಕೊಳ್ಳಲು ಅತ್ತೆ – ಮಾವನಿಂದ ಹೈಡ್ರಾಮಾ…!
ಈ ಕುರಿತು ಐಎಂಎ ಅಧ್ಯಕ್ಷ ಜೆ.ಎ. ಜಯಲಾಲ್ ಘೋಷಿಸಿದ್ದು, ಜೂನ್ 18ರಂದು ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲವೆಡೆ ನಡೆದಿರುವ ದಾಳಿ ಖಂಡಿಸಿ ಹಾಗೂ ವೈದ್ಯರುಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ‘ರಕ್ಷಕರನ್ನು ರಕ್ಷಿಸಿ’ ಘೋಷ ವಾಕ್ಯದಡಿ ಪ್ರತಿಭಟನೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ದೇಶಾದ್ಯಂತ ವೈದ್ಯರು ಜೂನ್ 18ರಂದು ಕಪ್ಪು ಮಾಸ್ಕ್, ಪಟ್ಟಿ ಹಾಗೂ ಕಪ್ಪು ಶರ್ಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದರು.
ವಾಹನ ಚಾಲನೆ ಪರವಾನಿಗೆ ನಿಯಮದಲ್ಲಿ ಮಹತ್ವದ ಬದಲಾವಣೆ: RTO ಕಛೇರಿಗೆ ಹೋಗದೆಯೂ ಪಡೆಯಬಹುದು ಡಿಎಲ್
ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ಮಾನಸಿಕ ಒತ್ತಡವಿಲ್ಲದೇ, ದೈಹಿಕ ಹಾನಿಯಂತಹ ಅಪಾಯವಿಲ್ಲದೇ ಭಯವಿಲ್ಲದ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ವೈದ್ಯರಿಗೆ ಅವಕಾಶ ಮಾಡಿಕೊಡಬೇಕು. ಈಗಾಗಲೇ ಕೊರೊನಾ ವೈರಸ್ ಗೆ ಸಾವಿರಾರು ವೈದರು ಬಲಿಯಾಗಿದ್ದು, ವೈದ್ಯರ ಜೀವ ರಕ್ಷಣೆ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.