ಚೆನ್ನೈ: ನಾಲ್ಕು ವರ್ಷದ ಬಳಿಕ ತವರು ರಾಜ್ಯ ತಮಿಳುನಾಡಿಗೆ ತೆರಳುತ್ತಿರುವ ಶಶಿಕಲಾ ನಟರಾಜನ್, ರಾಜ್ಯ ಪ್ರವೇಶಕ್ಕೂ ಮುನ್ನ ಟೆಂಪಲ್ ರನ್ ಮಾಡುತ್ತಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ತೆರಳುವ ಮಾರ್ಗ ಮಧ್ಯೆ ಕೆಲ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ತಮಿಳುನಾಡು ಪ್ರವೇಶಕ್ಕೂ ಮುನ್ನ ಹೊಸೂರು ಮಾರಿಯಮ್ಮ ದೇವಸ್ಥಾನಕ್ಕೆ ತೆರಳಿರುವ ಶಶಿಕಲಾ, ದೇವಿಯ ದರ್ಶನ ಪಡೆದಿದ್ದಾರೆ.
ಕೊರೊನಾದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ…!
ಇದಕ್ಕೂ ಮುನ್ನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಆಂಜನೇಯ ದೇವಸ್ಥಾನಕ್ಕೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಆಂಜನೇಯ ಪ್ರಸಾದ ಮಾತ್ರ ಸ್ವೀಕರಿಸಿದ್ದಾರೆ ಎನ್ನಲಾಗಿದೆ.