ನವದೆಹಲಿ: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದು ಈಗಿರುವ ಕೊರೊನಾ ವೈರಸ್ ಗಿಂತಲೂ ಶೇ.70ರಷ್ಟು ವೇಗವಾಗಿ ಹರಡುತ್ತಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಇದರ ಬೆನ್ನಲ್ಲೇ ಭಾರತ ಸೇರಿದಂತೆ ಹಲವು ದೇಶಗಳು ಬ್ರಿಟನ್ ನಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿವೆ.
ಬ್ರಿಟನ್ ನಲ್ಲಿ ಕೊರೊನಾ ಎರಡನೇ ಅಲೆ ಜೊತೆಗೆ ಕೊರೊನಾ ವೈರಸ್ ನ ಹೊಸ ರೂಪಾಂತರ ಆರಂಭವಾಗಿದ್ದು, ನಿರೀಕ್ಷೆಗೂ ಮೀರಿ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈಗಾಗಲೇ ಬ್ರಿಟನ್ ನಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.
ಬ್ರಿಟನ್ ನಿಂದ ಬರುವವರಿಂದ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ 30 ದೇಶಗಳು ವಿಮಾನ ಯಾನಕ್ಕೆ ನಿರ್ಬಂಧ ವಿಧಿಸಿವೆ. ಈ ನಡುವೆ ಭಾರತ ಸರ್ಕಾರ ಕೂಡ ಬ್ರಿಟನ್ ನಿಂದ ಬರುವ ವಿಮಾನಕ್ಕೆ ಡಿಸೆಂಬರ್ 31ರವರೆಗೆ ನಿರ್ಬಂಧ ವಿಧಿಸಿದೆ.