ಬಿಎಸ್ -4 ವಾಹನಗಳ ನೋಂದಣಿಯನ್ನು ಮುಂದಿನ ಆದೇಶ ಬರುವವರೆಗೂ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಮಾರ್ಚ್‌ನಲ್ಲಿ ಈ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನ್ಯಾಯಾಲಯ, ಈ ಪ್ರಕರಣವು ಗೊಂದಲ ಮೂಡಿಸುತ್ತದೆ ಎಂದಿದೆ.
ಮಾರ್ಚ್ 31 ರವರೆಗೆ ಬಿಎಸ್ -4 ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯ ಆದೇಶಿಸಿತ್ತು. ನಂತರ ಲಾಕ್ ಡೌನ್ ಜಾರಿಯಾಗಿತ್ತು. ಹಾಗಾಗಿ ಲಾಕ್ ಡೌನ್ ನಂತ್ರ ಮತ್ತೆ ಮಾರಾಟಕ್ಕೆ ಅನುಮತಿ ನೀಡಿತ್ತು. ಶೇಕಡಾ 10ರಷ್ಟು ವಾಹನಗಳ ಮಾರಾಟ ಮಾಡುವಂತೆ ಕೋರ್ಟ್ ಹೇಳಿತ್ತು. ಆದ್ರೆ ಮಾರ್ಚ್ ಮಾರಾಟದ ಅಂಕಿಅಂಶಗಳನ್ನು ನೋಡಿದಾಗ ನ್ಯಾಯಾಲಯಕ್ಕೆ ಶಂಕೆ ವ್ಯಕ್ತವಾಗಿದೆ.
ಮಾರ್ಚ್ 31, 2020 ರ ನಂತರ ಮಾರಾಟವಾದ ಬಿಎಸ್ -4 ವಾಹನಗಳನ್ನು ನೋಂದಾಯಿಸಬಾರದು ಎಂದು ಜುಲೈ 9 ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕೊರೊನಾ ಕಾರಣದಿಂದಾಗಿ ಬಿಎಸ್-4 ವಾಹನಗಳ ಮಾರಾಟಕ್ಕಾಗಿ ನೀಡಿದ್ದ ಗಡುವನ್ನು ಮೀರಿ ವಿತರಕರು ವಾಹನ ಮಾರಾಟ ಮಾಡಿದ್ದಾರೆ ಎಂಬ ಅನುಮಾನ ಮೂಡಿದೆ. ಇದ್ರ ಬಗ್ಗೆ ತನಿಖೆ ನಡೆಸಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.