ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲ್ಪಟ್ಟಿದ್ದ ಲಾಲ್ ಕೃಷ್ಣ ಅಡ್ವಾನಿ ಸೇರಿದಂತೆ ಎಲ್ಲ ಆರೋಪಿಗಳೂ ನಿರ್ದೋಷಿಗಳೆಂದು ಲಕ್ನೋ ಹೈಕೋರ್ಟ್ ನ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.
ಘಟನೆ ಪೂರ್ವ ನಿಯೋಜಿತವಲ್ಲವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಇದೊಂದು ಆಕಸ್ಮಿಕ ಘಟನೆ ಎಂದು ಹೇಳಲಾಗಿದೆ. ಹೀಗಾಗಿ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾನಿ, ಉಮಾಭಾರತಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಎಲ್ಲ 32 ಆರೋಪಿಗಳೂ ನಿರ್ದೋಷಿಗಳೆಂದು ತೀರ್ಪು ನೀಡಲಾಗಿದೆ.
28 ವರ್ಷಗಳ ಬಳಿಕ ಈ ಪ್ರಕರಣದ ಕುರಿತು ಐತಿಹಾಸಿಕ ತೀರ್ಪು ಹೊರಬಿದ್ದಿದ್ದು, ಆರೋಪಿಗಳ ವಿರುದ್ದ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳಿಲ್ಲವೆಂದು ತಿಳಿಸಿರುವ ನ್ಯಾಯಾಲಯ ಹೀಗಾಗಿ ಪ್ರಕರಣದಲ್ಲಿದ್ದ ಎಲ್ಲರೂ ನಿರ್ದೋಷಿಗಳೆಂದು ತಿಳಿಸಿದೆ.