ನಲಗೊಂಡ: ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಮಹಿಳಾ ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಕೆ ಮಾಡಿದ್ದು, ಸಿಎಂ ವರ್ತನೆಗೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ನಾಗಾರ್ಜುನ್ ಸಾಗರದ ಬಳಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಹಲವು ಮಹಿಳೆಯರು ಮನವಿ ಪತ್ರವೊಂದನ್ನು ಸಲ್ಲಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಲು ಆರಂಭಿಸಿದ್ದರು. ಇದರಿಂದ ಕೋಪಗೊಂಡ ಸಿಎಂ, ಮನವಿ ಪತ್ರವನ್ನು ಸಲ್ಲಿಸಿದ್ದೀರಿ ಅಂದ ಮೇಲೆ ಪ್ರತಿಭಟನೆಯನ್ನು ಇಲ್ಲಿಗೆ ಬಿಟ್ಟು, ಸುಮ್ಮನೇ ಕುಳಿತುಕೊಳ್ಳಿ. ನಿಮ್ಮ ಮೂರ್ಖತನದ ನಡವಳಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಅನಗತ್ಯವಾಗಿ ಹಲ್ಲೆಗೊಳಗಾಗುತ್ತೀರಿ ಅಷ್ಟೇ. ನಿಮ್ಮಂಥ ಶ್ವಾನಗಳು ಸಾಕಷ್ಟಿವೆ. ಅಂಥ ಎಷ್ಟೋ ಜನರನ್ನು ನಾನು ನೋಡಿದ್ದೇನೆ ಎಂದು ಗುಡುಗಿದ್ದಾರೆ.
BIG NEWS: ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಸಿಎಂ ಸಿಡಿಮಿಡಿ
ತೆಲಂಗಾಣ ಸಿಎಂ ಈ ವರ್ತನೆಗೆ ಕಿಡಿಕಾರಿರುವ ವಿಪಕ್ಷ ಟಿಎಂಸಿಸಿ ನಾಯಕ ಮಣಿಕ್ಕಮ್ ಟಾಗೋರ್, ಚಂದ್ರಶೇಖರ್ ರಾವ್, ಪ್ರಜಾಪ್ರಭುತ್ವ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ. ಮಹಿಳೆಯರನ್ನು ಶ್ವಾನ ಎಂದು ಕರೆದು ಅವಮಾನ ಮಾಡುತ್ತಿದ್ದಾರೆ. ಮೊದಲು ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.