ಭಾರತದ ಸೇರಿದಂತೆ ಅನೇಕ ದೇಶಗಳಲ್ಲಿ ಸಾಕಷ್ಟು ಆಶ್ರಮವಿದೆ. ಅನಾಥಾಶ್ರಮ,ವೃದ್ಧಾಶ್ರಮ ಸೇರಿದಂತೆ ಸಾಕಷ್ಟು ಆಶ್ರಮವಿದೆನ.ಆದ್ರೆ ಭಾರತದಲ್ಲಿ ಭಿನ್ನ ಆಶ್ರಮವೊಂದಿದೆ.ಈ ಆಶ್ರಮದಲ್ಲಿ ಮಕ್ಕಳು ದೂರ ಮಾಡಿದ ವೃದ್ಧರಾಗ್ಲಿ ಇಲ್ಲ ಅನಾಥ ಮಕ್ಕಳಾಗ್ಲಿ ಇಲ್ಲ. ಈ ಆಶ್ರಮದಲ್ಲಿ ಇರೋದು ಪತ್ನಿಯಿಂದ ಶೋಷಣೆಗೊಳಗಾದ ಪತಿಯಂದಿರು.
ಪತ್ನಿಯಿಂದ ಹಿಂಸೆಗೊಳಗಾದ ಪತಿಯರು ಈ ಆಶ್ರಮದಲ್ಲಿ ಆಶ್ರಯಪಡೆಯಬಹುದು. ಈ ಆಶ್ರಮಕ್ಕೆ ಪ್ರವೇಶ ಪಡೆಯಲು ಕೆಲ ಪರೀಕ್ಷೆ ಪಾಸ್ ಆಗಬೇಕು. ಅದ್ರಲ್ಲಿ ಪಾಸ್ ಆದ್ರೆ ಆಶ್ರಮದಲ್ಲಿ ಜಾಗ ಸಿಗುತ್ತದೆ.ಈ ಆಶ್ರಮ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿದೆ.
ಈ ಆಶ್ರಮವನ್ನು ಭರತ್ ಎಂಬುವವರು ತೆರೆದಿದ್ದಾರೆ.ಪತ್ನಿ ಇವರ ವಿರುದ್ಧ ನಾಲ್ಕು ದೂರು ದಾಖಲಿಸಿದ್ದರಂತೆ. ಇದಾದ ನಂತ್ರ ಭರತ್ ಮೇಲೆ ಯಾರೂ ಮಾತನಾಡ್ತಿರಲಿಲ್ಲವಂತೆ. ನಂತ್ರ ಭರತ್ ಪತ್ನಿ ಪೀಡಿತ ಇನ್ನೂ ಕೆಲವರ ಜೊತೆ ಮಾತುಕತೆ ನಡೆಸಿದ್ರು. ನಂತ್ರ ಆಶ್ರಮ ತೆರೆದ್ರು. 40ಕ್ಕಿಂತಲೂ ಹೆಚ್ಚು ಕೇಸ್ ಇರುವು ಅಥವಾ ಪತ್ನಿ ಕಾರಣಕ್ಕೆ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳು ಇಲ್ಲಿ ಜಾಗ ಪಡೆಯಬಹುದು. ಕೈಲಾದ ಕೆಲಸ ಮಾಡಿ ಹಣ ಸಂಪಾದಿಸಿ ಆಶ್ರಮಕ್ಕೆ ನೀಡ್ತಾರೆ. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಇಲ್ಲಿ ಕೆಲವರು ಆಶ್ರಯ ಪಡೆದಿದ್ದಾರೆ.