ಗಂಡನ ಆಸ್ತಿಯನ್ನು ಪಡೆಯಲು ಮೊದಲ ಹೆಂಡತಿಗೆ ಮಾತ್ರ ಹಕ್ಕಿದೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವ್ಯಕ್ತಿ ಇಬ್ಬರು ಪತ್ನಿಯರನ್ನು ಹೊಂದಿದ್ದರೆ ಇಬ್ಬರೂ ಆಸ್ತಿಯಲ್ಲಿ ಪಾಲು ಪಡೆದಿದ್ದರೆ ಮೊದಲ ಪತ್ನಿ ಹಕ್ಕನ್ನು ಮಾತ್ರ ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಹಣವನ್ನು ಇಬ್ಬರು ಪತ್ನಿಯರ ಮಕ್ಕಳಿಗೆ ನೀಡಬಹುದೆಂದು ಕೋರ್ಟ್ ಹೇಳಿದೆ.
ಮಹಾರಾಷ್ಟ್ರ ರೈಲ್ವೆ ಪೊಲೀಸ್ ಪಡೆಯ ಸಬ್ ಇನ್ಸ್ಪೆಕ್ಟರ್ ಸುರೇಶ್ ಮೇ 30 ರಂದು ಕೊರೊನಾಕ್ಕೆ ಬಲಿಯಾಗಿದ್ದಾರೆ. ಅವ್ರಿಗೆ ರಾಜ್ಯ ಸರ್ಕಾರ 65 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಸುರೇಶ್ ಪತ್ನಿಯೆಂದು ಇಬ್ಬರು ಮಹಿಳೆಯರು ಈ ಹಣ ಪಡೆಯಲು ಮುಂದಾಗಿದ್ದರು.
ಸುರೇಶ್ ಎರಡನೇ ಪತ್ನಿ ಮಗಳು ಶ್ರದ್ಧಾ, ಪರಿಹಾರದ ಹಕ್ಕು ನಮಗಿದೆ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿವಾದ ಹೆಚ್ಚಾಗ್ತಿದ್ದಂತೆ ರಾಜ್ಯ ಸರ್ಕಾರ ಹಣವನ್ನು ನ್ಯಾಯಾಲಯದಲ್ಲಿ ಇಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈಗ ಈ ತೀರ್ಪು ನೀಡಿದೆ.