
ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ಕು ಅಪ್ರಾಪ್ತ ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ. ಮಕ್ಕಳ ಪಾಲಕರು ಕೆಲಸಕ್ಕೆಂದು ಮಧ್ಯಪ್ರದೇಶಕ್ಕೆ ಹೋಗಿದ್ದಾರೆ.
ಜಲ್ಗಾಂವ್ ನ ಗ್ರಾಮವೊಂದರಲ್ಲಿ ಮುಸ್ತಫಾ ಎಂಬ ವ್ಯಕ್ತಿ ಮಕ್ಕಳನ್ನು ಸಾಕುತ್ತಿದ್ದ. ನಾಲ್ಕೂ ಮಕ್ಕಳ ಶವ, ಹೊಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ. ಘಟನೆ ಇಡೀ ಗ್ರಾಮಸ್ಥರನ್ನು ಭಯಗೊಳಿಸಿದೆ. ಜನರು ದಂಗಾಗಿದ್ದಾರೆ. 12 ವರ್ಷದ ಬಾಲಕಿ, 11 ವರ್ಷದ ಬಾಲಕ, ಎಂಟು ವರ್ಷದ ಬಾಲಕ ಹಾಗೂ ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದಾರೆ.
ಮೃತದೇಹ ಮುಸ್ತಫಾನ ಜಮೀನಿನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದೆ. ಕೊಡಲಿಯಿಂದ ಹತ್ಯೆ ಮಾಡಿ ನಂತ್ರ ನೇಣು ಬಿಗಿಯಲಾಗಿದೆ ಎನ್ನಲಾಗ್ತಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.