ಚೆನ್ನೈ: ನಿವಾರ್ ಚಂಡಮಾರುತದಿಂದ ಚೇತರಿಸಿಕೊಳ್ಳುತ್ತಿರುವ ತಮಿಳುನಾಡಿಗೆ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಡಿಸೆಂಬರ್ 2 ಹಾಗೂ 3ರಂದು ಬುರೇವಿ ಚಂಡಮಾರುತ ಅಪ್ಪಳಿಸಲಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ಬುರೇವಿ ಚಂಡಮಾರುತ ಆರಂಭವಾಗಲಿದೆ. ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 2ರಂದು ಚಂಡಮಾರುತ ಶ್ರೀಲಂಕಾ ಕರಾವಳಿ ದಾಟಲಿದ್ದು, ಡಿಸೆಂಬರ್ 3ರಂದು ತಮಿಳುನಾಡು ಪ್ರವೇಶಿಸಲಿದೆ. ಹೀಗಾಗಿ ಡಿ.3 ಹಾಗೂ 4ರಂದು ತಮಿಳುನಾಡು, ಪುದುಚೆರಿ, ಕೇರಳ ಹಾಗೂ ಆಂಧ್ರಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತದ ಪರಿಣಾಮ ಕರ್ನಾಟಕದ ಕೊಡಗು, ಮಂಡ್ಯ, ಮೈಸೂರು ಭಾಗದಲ್ಲಿಯೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.