ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಅಚಾನಾಕ್ ಆಗ್ತಿರುವ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಕೊರೊನಾದಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುತ್ತಿದ್ದು, ಇದು ಸಾವಿಗೆ ಕಾರಣವಾಗ್ತಿದೆಯಂತೆ.
ಲಕ್ನೋದ ಕೆಜಿಎಂಯು ಆಸ್ಪತ್ರೆಯ ವೈದ್ಯ ವೇದ್ ಪ್ರಕಾಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ಶ್ವಾಸಕೋಶದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತದೆ.ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಆಮ್ಲಜನಕದ ಎಲ್ಲಾ ಮಾರ್ಗಗಳು ಬಂದ್ ಆಗ್ತಿವೆ. ಇದರಿಂದಾಗಿ ಕೊರೊನಾ ರೋಗಿಗಳು ಇದ್ದಕ್ಕಿದ್ದಂತೆ ಸಾಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಏಕೆ ರಕ್ತ ಹೆಪ್ಪುಗಟ್ಟುತ್ತಿದೆ ಎಂಬುದರ ಪರೀಕ್ಷೆ ಕೂಡ ನಡೆಯುತ್ತಿದೆ. ರಕ್ತ ಹೆಪ್ಪುಗಟ್ಟುತ್ತಿರುವ ರೋಗಿಗಳಿಗೆ ರಕ್ತ ತೆಳುವಾಗಲು ಔಷಧಿ ನೀಡಲಾಗ್ತಿದೆಯಂತೆ.ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್ ಮೂಲಕ ರಕ್ತ ಹೆಪ್ಪುಗಟ್ಟಿರುವುದನ್ನು ಪತ್ತೆ ಹಚ್ಚಬಹುದಾಗಿದೆ.