
ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯ ಸನಿಹದಲ್ಲಿದ್ದಾರೆ. ಅಂಬಾನಿ ಕೇವಲ ಒಂದೇ ದಿನದಲ್ಲಿ 19,000 ಕೋಟಿ ಗಳಿಸುವ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 13ನೇ ಸ್ಥಾನಕ್ಕೇರಿದ್ದಾರೆ.
ಪ್ರಸ್ತುತ ಟಾಪ್-10ರಲ್ಲಿ ಸ್ಥಾನ ಪಡೆಯಲು ಕೇವಲ 3 ಕೈಗಾರಿಕೋದ್ಯಮಿಗಳನ್ನು ಹಿಂದಿಕ್ಕಬೇಕಿದೆ. ಕಳೆದ 24 ಗಂಟೆಗಳಲ್ಲಿ ಮುಖೇಶ್ ಅಂಬಾನಿ ಅವರ ಸಂಪತ್ತು 2 ಶತಕೋಟಿ ಡಾಲರ್‌ಗಿಂತ ಹೆಚ್ಚಾಗಿದೆ.
ಈ ಹೆಚ್ಚಳದ ನಂತರ ಅಂಬಾನಿ ಅವರ ನಿವ್ವಳ ಮೌಲ್ಯವು 90 ಬಿಲಿಯನ್ ಡಾಲರ್ ದಾಟಿದೆ. ಮುಕೇಶ್ ಅಂಬಾನಿ ಈ ಪಟ್ಟಿಯಲ್ಲಿ 13 ನೇ ಸ್ಥಾನದಲ್ಲಿದ್ದಾರೆ.
12ನೇ ಸ್ಥಾನದಲ್ಲಿ ಫ್ರಾನ್ಸ್‌ನ ಫ್ರಾಂಕೋಯಿಸ್ ಬೆಟಾನ್‌ಕೋರ್ಟ್ ಮೀರ್ಸ್ ಇದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 92.6 ಬಿಲಿಯನ್ ಡಾಲರ್. ಇದಲ್ಲದೆ 11ನೇ ಸ್ಥಾನದಲ್ಲಿರುವ ಮೆಕ್ಸಿಕೊದ ಕಾರ್ಲೋಸ್ ಸ್ಲಿಮ್ ಅವರ ಆಸ್ತಿ ಸುಮಾರು 97.2 ಬಿಲಿಯನ್ ಡಾಲರ್. 10 ನೇ ಸ್ಥಾನದಲ್ಲಿ ಅಮೆರಿಕದ ಸೆರ್ಗೆ ಬ್ರಿನ್ ಇದ್ದಾರೆ, ಅವರ ಆಸ್ತಿ ಸುಮಾರು 104 ಬಿಲಿಯನ್ ಡಾಲರ್‌ನಷ್ಟಿದೆ.
ಗೌತಮ್ ಅದಾನಿಗೆ 21 ನೇ ಸ್ಥಾನ
ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನ ಪಟ್ಟಿಯಲ್ಲಿ ಅಂಬಾನಿ ಅವರನ್ನು ಹೊರತುಪಡಿಸಿದ್ರೆ ಉದ್ಯಮಿ ಗೌತಮ್ ಅದಾನಿ 21 ನೇ ಸ್ಥಾನದಲ್ಲಿದ್ದಾರೆ. ಶ್ರೀಮಂತರ ಪಟ್ಟಿಯ ಟಾಪ್-20 ರಿಂದಲೂ ಅದಾನಿ ಹೊರಗುಳಿದಿದ್ದಾರೆ. ಮೊದಲ ಸ್ಥಾನದಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಸುಮಾರು 247 ಬಿಲಿಯನ್ ಡಾಲರ್.
ಈ ವರ್ಷ ಇದುವರೆಗೂ ಎಲೋನ್ ಮಸ್ಕ್ 110 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಕೇವಲ 24 ಗಂಟೆಗಳಲ್ಲಿ 13 ಬಿಲಿಯನ್ ಡಾಲರ್ ಗಳಿಸಿರೋದು ವಿಶೇಷ. ಈ ಪಟ್ಟಿಯಲ್ಲಿ ಮೆಟಾದ ಮಾರ್ಕ್ ಜುಕರ್‌ಬರ್ಗ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಈ ವರ್ಷ ಇಲ್ಲಿಯವರೆಗೆ 58.6 ಬಿಲಿಯನ್ ಡಾಲರ್ ಗಳಿಸಿದ್ದಾರೆ.