ತಿರುವನಂತಪುರಂ: ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇರಳ ಸರ್ಕಾರ ಲಾಕ್ ಡೌನ್ ಮೊರೆಹೋಗಿದ್ದು, ಮೇ 8ರಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಿ ಸಿಎಂ ಪಿಣರಾಯಿ ವಿಜಯನ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಎರಡನೇ ಅಲೆ ತಡೆಗಟ್ಟಲು ಕೇರಳ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಿಂದಲೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಮೇ 8ರಿಂದ 16 ರ ವರೆಗೆ ಲಾಕ್ ಡೌನ್ ಘೋಷಿಸಿದೆ.
ಪಕ್ಕದ ಕೇರಳದಲ್ಲಿ ಕೂಡ ಕೊರೊನಾ ಕಟ್ಟಿಹಾಕಲು ಲಾಕ್ ಡೌನ್ ಕ್ರಮ ಅನುಸರಿಸುತ್ತಿರುವ ಬೆನ್ನಲ್ಲೇ ಕೊರೊನಾ ಮಿತಿ ಮೀರುತ್ತಿರುವ ಕರ್ನಾಟಕದಲ್ಲಿಯೂ ಲಾಕ್ ಡೌನ್ ಜಾರಿ ಮಾಡಬೇಕು ಎಂಬ ಒತ್ತಾಯ ಹೆಚ್ಚಿದೆ.