
ಕೋವಿಡ್ -19 ಪ್ರಕರಣಗಳು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿ ತಿಂಗಳು ಈ ಸಂಖ್ಯೆ ಹೊಸ ದಾಖಲೆಯನ್ನು ಬರೆಯುತ್ತಿದೆ. ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ ಕೊರೊನಾ ವೈರಸ್ ಚಿಕಿತ್ಸೆಗಾಗಿ ಹೆಲ್ತ್ ಕ್ಲೇಮ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಆರೋಗ್ಯ ವಿಮಾ ಕಂಪೆನಿಗಳ ಪ್ರಕಾರ, ಜೂನ್ಗೆ ಹೋಲಿಸಿದರೆ ಜುಲೈನಲ್ಲಿ ಹೆಲ್ತ್ ಕ್ಲೇಮ್ ಶೇಕಡಾ 240 ರಷ್ಟು ಹೆಚ್ಚಾಗಿದೆ. ಜನರಲ್ ಇನ್ಶುರೆನ್ಸ್ ಕೌನ್ಸಿಲ್ ಅಂಕಿಅಂಶಗಳ ಪ್ರಕಾರ, ಜುಲೈ ಕೊನೆಯ ವಾರದವರೆಗೆ 71423 ಜನರು ಕೊರೊನಾನಾ ಚಿಕಿತ್ಸೆಗಾಗಿ 1145.87 ಕೋಟಿ ರೂಪಾಯಿ ಪಡೆದಿದ್ದಾರೆ. ಇದಕ್ಕೂ ಮೊದಲು ಜೂನ್ 22 ರವರೆಗೆ ಕೇವಲ 20965 ಜನರು ಕೊರೊನಾ ಚಿಕಿತ್ಸೆಗಾಗಿ 323 ಕೋಟಿ ರೂಪಾಯಿ ಕ್ಲೇಮ್ ಮಾಡಿದ್ದರು.
ಹೆಲ್ತ್ ಕ್ಲೇಮ್ ಏರಿಕೆಯ ಹೊರತಾಗಿಯೂ ದೇಶದಲ್ಲಿ ವಿಮೆಯ ವ್ಯಾಪ್ತಿ ಸೀಮಿತವಾಗಿದೆ. ದೇಶದಲ್ಲಿ ವೈರಸ್ ಸೋಂಕಿಗೆ ಒಳಗಾದ ಒಟ್ಟು ಜನರಲ್ಲಿ ಕೇವಲ 4.08 ರಷ್ಟು ಜನರು ಮಾತ್ರ ಆರೋಗ್ಯ ವಿಮೆ ಪಡೆದಿದ್ದಾರೆ. ದೇಶದಲ್ಲಿ 37 ಸಾವಿರಕ್ಕೂ ಹೆಚ್ಚು ಜನರು ಕೊರೊನಾಕ್ಕೆ ಸಾವನ್ನಪ್ಪಿದ್ದಾರೆ.