ನವದೆಹಲಿ: ಏಕತಾ ಪ್ರತಿಮೆ ಇರುವ ಗುಜರಾತ್ ನ ಕೆವಾಡಿಯಾಗೆ ದೇಶದ ವಿವಿಧ ಭಾಗಗಳಿಂದ ಸಂಚರಿಸುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಏಕಕಾಲಕ್ಕೆ ಚಾಲನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ 8 ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ, ದೇಶದ ಮೂಲೆ ಮೂಲೆಗಳಿಂದ ಒಂದೇ ಸ್ಥಳಕ್ಕೆ ಆಗಮಿಸುವ 8 ರೈಲು ಸೇವೆ ನೀಡಲಾಗಿದ್ದು, ದೇಶದ ಇತಿಹಾಸದಲ್ಲೇ ಇದು ಮೊದಲು ಎಂದು ಹೇಳಿದರು.
ಏಕತಾ ಪ್ರತಿಮೆ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಹಾಗೂ ಬುಡಕಟ್ಟು ಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಜೀವನದಲ್ಲೂ ಬದಲಾವಣೆ ತರುವ ಉದ್ದೇಶದಿಂದ ರೈಲ್ವೆ ಯೋಜನೆ ಸಹಕಾರಿಯಾಗಲಿದೆ ಎಂದರು.