ತಿರುವನಂತಪುರಂ: ಕೇರಳದ ಗಡಿಯಲ್ಲಿ ಎನ್ ಸಿ ಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 3000 ಕೋಟಿ ರೂ. ಮೌಲ್ಯದ ಹೆರಾಯಿನ್ ಜಪ್ತಿ ಮಾಡಿದ್ದಾರೆ.
ಕೇರಳ ಗಡಿಯಲ್ಲಿ ಶ್ರೀಲಂಕಾ ಮೀನುಗಾರಿಕಾ ಬೋಟ್ ಮೇಲೆ ಎನ್ ಸಿ ಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 300 ಕೆಜಿ ಹೆರಾಯಿನ್, 1 ಎಕೆ 47 ರೈಫಲ್, 1000 ಬುಲೆಟ್ ಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳನ್ನು ಸಮುದ್ರದ ಮಾರ್ಗವಾಗಿ ರವಿಹನ್ಸಿ ಎಂಬ ಬೋಟ್ ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು.
ಚಿಕ್ಕಪ್ಪನ ಮಗನನ್ನೇ ಮದುವೆಯಾದ ಪುತ್ರಿ, ಕುಟುಂಬದವರ ಕಠಿಣ ನಿರ್ಧಾರ: ಸಂಬಂಧ ಕಡಿದುಕೊಳ್ಳಲು ಅಂತ್ಯಸಂಸ್ಕಾರ
ಬೋಟ್ ನ ನೀರಿನ ಟ್ಯಾಂಕ್ ಒಳಗೆ ಹೆರಾಯಿನ್ ಸಂಗ್ರಹಿಸಿ ಇಡಲಾಗಿತ್ತು. 301 ಪ್ಯಾಕೇಟ್ ಗಳಲ್ಲಿ ಇದ್ದ 300 ಕೆಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ. ಇದರ ಮೌಲ್ಯ ಸುಮಾರು 3 ಸಾವಿರ ಕೋಟಿ ಎನ್ನಲಾಗಿದೆ. ಹೆರಾಯಿನ್ ಪ್ಯಾಕೇಟ್ ಗಳ ಮೇಲೆ ಕುದುರೆಯ ಚಿತ್ರ ಕಂಡು ಬಂದಿದೆ.