ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸದ ನಾಲ್ಕು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೊಟೀಸ್ ಜಾರಿ ಮಾಡಿದೆ. ದೆಹಲಿ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯಗಳಿಗೆ ಸುಪ್ರೀಂ ನೊಟೀಸ್ ಕಳುಹಿಸಿದೆ.
ರಾಜ್ಯ ಸರ್ಕಾರಗಳು ಈ ಯೋಜನೆಯನ್ನು ಜಾರಿಗೊಳಿಸದ ಕಾರಣ ರಾಜ್ಯದ ಜನರಿಗೆ ನಷ್ಟವಾಗ್ತಿದೆ. ಈ ಯೋಜನೆಯಲ್ಲಿ ಸಿಗುವ ಲಾಭ ಸಿಗ್ತಿಲ್ಲವೆಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ನಾಲ್ಕು ರಾಜ್ಯಗಳಿಗೆ ತಮ್ಮ ಅಭಿಪ್ರಾಯ ತಿಳಿಸಲು ಹೇಳಿದೆ.
ಆಯುಷ್ಮಾನ್ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆರ್ಥಿಕ ರೇಖೆಯಿಂದ ಕೆಳಗಿರುವವರಿಗೆ, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ ಇದ್ರಡಿ ಆರೋಗ್ಯ ವಿಮೆ ನೀಡುತ್ತದೆ. ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ ದೇಶದ 10.74 ಕೋಟಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಕ್ಯಾಶ್ಲೆಸ್ ಕವರ್ ನೀಡುತ್ತದೆ. 2018, ಏಪ್ರಿಲ್ 14ರಂದು ನರೇಂದ್ರ ಮೋದಿ ಈ ಯೋಜನೆ ಆರಂಭಿಸಿದ್ದರು.