
ಕೊರೊನಾ ಮಧ್ಯೆ ಆಸ್ಪತ್ರೆ ಹಾಗೂ ವಿಮಾ ಕಂಪನಿಗಳ ಹಗ್ಗಜಗ್ಗಾಟ ಶುರುವಾಗಿದೆ. ಇದ್ರಿಂದಾಗಿ ರೋಗಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಕೊರೊನಾ ರೋಗಿಗಳ ಆಸ್ಪತ್ರೆ ಬಿಲ್ ಅತಿಯಾಗಿ ಬರ್ತಿದೆ ಎಂದು ವಿಮಾ ಕಂಪನಿಗಳು ಆರೋಪ ಮಾಡಿವೆ.
ವಿಮಾ ಕಂಪನಿಗಳು ರೋಗಿಗಳ ಪೂರ್ಣ ಬಿಲ್ ಪಾವತಿ ಮಾಡುವಂತೆ ಆಸ್ಪತ್ರೆಗಳು ಹೇಳ್ತಿವೆ. ಆದ್ರೆ ನಿಗದಿತ ಹಣವನ್ನು ನಾವು ನೀಡ್ತಿದ್ದೇವೆಂದು ವಿಮಾ ಕಂಪನಿಗಳು ಹೇಳ್ತಿವೆ. ಒಂದು ವೇಳೆ ಆಸ್ಪತ್ರೆಗಳು ಇದೇ ರೀತಿ ಬಿಲ್ ನೀಡ್ತಿದ್ದರೆ ಕೋವಿಡ್ -19 ವಿಮೆದಾರರು ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ವಿಮಾ ಕಂಪನಿ ಹೇಳಿದೆ.
ಆಸ್ಪತ್ರೆ ಮತ್ತು ವಿಮಾ ಕಂಪನಿಗಳ ಈ ವಿವಾದವು ವಿಮಾದಾರರ ಮೇಲೆ ಹೊಣೆ ಹೇರಿದೆ. ಪಿಪಿಇ ಕಿಟ್‌ಗಳು ಸೇರಿದಂತೆ ಇತರ ಸಾಧನಗಳನ್ನು ಸೇರಿಸಿ ಕೋವಿಡ್ -19 ಚಿಕಿತ್ಸೆಯು ಒಟ್ಟು ಮೊತ್ತವನ್ನು ಹೆಚ್ಚಿಸಲಾಗ್ತಿದೆ.