ಅಶ್ಲೀಲತೆ ಮತ್ತು ದ್ವೇಷ ಹುಟ್ಟು ಹಾಕ್ತಿದ್ದ ಸುಮಾರು 500 ವೆಬ್ ಸೈಟ್‌ಗಳನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಬಂದ್ ಮಾಡಿದೆ. ಸಿಸಿಪಿಡಬ್ಲ್ಯುಸಿ ಮತ್ತು ಸೈಬರ್ ಸೆಲ್ ನಿಂದ ಬಂದ ದೂರುಗಳ ಆಧಾರದ ಮೇಲೆ ಕಳೆದ 18 ತಿಂಗಳಲ್ಲಿ ಸುಮಾರು 50 ಸೈಬರ್ ಅಪರಾಧಿಗಳನ್ನು ಬಂಧಿಸಲಾಗಿದೆ.
ಇನ್ನೂ ಕೆಲ ವೆಬ್ಸೈಟ್ ಗಳ ಪರಿಶೀಲನೆ ನಡೆಯುತ್ತಿದೆ ಎಂದು ದೆಹಲಿ ಸೈಬರ್ ಸೆಲ್ ಪೊಲೀಸರು ಹೇಳಿದ್ದಾರೆ. ಇದ್ರಲ್ಲಿ ಕೆಲ ಸಾಮಾಜಿಕ ಜಾಲತಾಣದ ಯು.ಆರ್.ಎಲ್. ಕೂಡ ಸೇರಿದೆ. ಬೇರೆ ದೇಶಗಳಲ್ಲಿ ನಿಷೇಧಕ್ಕೊಳಗಾದ ಸಂಸ್ಥೆಗಳು ಈ ವೆಬ್ಸೈಟ್ ಗಳನ್ನು ನಡೆಸುತ್ತಿವೆ. ಇವು ಸಾಮಾಜಿಕ ಜಾಲತಾಣದಲ್ಲಿ ಅನೇಕ ಖಾತೆಗಳನ್ನು ತೆರೆದಿವೆ.
ಆಕ್ಷೇಪಾರ್ಹ, ರಾಷ್ಟ್ರ ವಿರೋಧಿ ಭಾವನೆಗಳನ್ನು ಹೆಚ್ಚಿಸುವ ಪೋಸ್ಟ್ ಗಳನ್ನು ಇವು ಹಾಕ್ತಿವೆ. ಅಂತಹ ಖಾತೆಗಳನ್ನು ಗುರುತಿಸಿ ರದ್ದು ಮಾಡುವ ಕೆಲಸದಲ್ಲಿ ಸೈಬರ್ ಸೆಲ್ ಬ್ಯುಸಿಯಾಗಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗ್ತಿದೆ. ಕಳೆದ 18 ತಿಂಗಳುಗಳಲ್ಲಿ ಇಂತಹ 500 ಕ್ಕೂ ಹೆಚ್ಚು ಯು.ಆರ್.ಎಲ್. ಗಳನ್ನು ನಿಷೇಧಿಸಲಾಗಿದೆ. ಸುಮಾರು 50 ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.