ಉತ್ತರ ಪ್ರದೇಶದ ಕಾನ್ಪುರ್ ಬಳಿ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದಾನೆ. ಪೊಲೀಸರ ಬಳಿ ಗನ್ ಕಸಿದು ಪರಾರಿಗೆ ಯತ್ನಿಸಿದ ವೇಳೆಯಲ್ಲಿ ಹತ್ಯೆ ಮಾಡಲಾಗಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಉಜ್ಜಯಿನಿಯಲ್ಲಿ ಬಂಧಿಸಲಾಗಿತ್ತು. ಆತನನ್ನು ಕಾನ್ಪುರ್ ಗೆ ಕರೆದೊಯ್ಯುವ ಸಂದರ್ಭದಲ್ಲಿ ಕಾರ್ ಪಲ್ಟಿಯಾಗಿದೆ.
ಕಾರ್ ಪಲ್ಟಿಯಾದ ವೇಳೆ ಪೊಲೀಸರ ಬಳಿ ಗನ್ ಕಸಿದು ವಿಕಾಸ್ ದುಬೆ ಪರಾರಿಗೆ ಪ್ರಯತ್ನಿಸಿದ್ದು ಪರಾರಿ ವೇಳೆಯಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ವಿಕಾಸ್ ದುಬೆ ಬಲಿಯಾಗಿದ್ದಾನೆ.