ಕಳೆದ ಒಂದು ವರ್ಷದಿಂದ ದೇಶದ ಜನತೆಗೆ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾಗೆ ಕೊನೆಗೂ ಸಂಜೀವಿನಿ ಸಿಕ್ಕಿದೆ. 2 ಕಂಪನಿಗಳ ಲಸಿಕೆಗಳನ್ನು ತುರ್ತು ಸಂದರ್ಭದಲ್ಲಿ ಬಳಸಲು ಡಿಸಿಜಿಐ ನಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ತುರ್ತು ಸಂದರ್ಭಗಳಲ್ಲಿ ಬಳಸಲು ಅನುಮತಿ ನೀಡಿರುವುದಾಗಿ ಡಿಸಿಜಿಐ ಮುಖ್ಯಸ್ಥ ಸೋಮಾನಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತುರ್ತು ಸಂದರ್ಭಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಲಸಿಕೆ ಬಳಸಬಹುದಾಗಿದೆ ಎಂದರು.
ಈಗಾಗಲೇ ಈ ಲಸಿಕೆಗಳ ಪ್ರಯೋಗ ಕೆಲ ಹಂತಗಳಲ್ಲಿ ಯಶಸ್ವಿಯಾಗಿದ್ದು, ಹೀಗಾಗಿ ತುರ್ತು ಸಂದರ್ಭದಲ್ಲಿ ಬಳಸಬಹುದಾಗಿದೆ ಎನ್ನಲಾಗಿದೆ. ಭಾರತದಲ್ಲಿ ಮೊದಲ ಹಂತದಲ್ಲಿ ಸುಮಾರು 30 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲು ಸಿದ್ದತೆ ನಡೆಸಲಾಗಿದ್ದು, ಇದಕ್ಕಾಗಿ ದೇಶದ ವಿವಿಧ ಭಾಗಗಳಲ್ಲಿ ʼಡ್ರೈ ರನ್ʼ ನಡೆಸಲಾಗಿತ್ತು.