ನೀವು ಆಧಾರ್ ಕಾರ್ಡ್ ಮಾಡಿಸಬೇಕೆ ? ಅದರಲ್ಲಿರುವ ಮಾಹಿತಿ ಪರಿಷ್ಕರಿಸಿ, ಉನ್ನತೀಕರಿಸಬೇಕೆ ? ಹಾಗಿದ್ದರೆ, ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಡಿ.
ಹೌದು, ಅಂಚೆ ಕಚೇರಿಗಳಲ್ಲೂ ಆಧಾರ್ ನೋಂದಣಿ, ಮಾಹಿತಿ ಪರಿಷ್ಕರಣೆಗೆ ಅವಕಾಶ ನೀಡಿದ್ದು, ಪ್ರಸ್ತತ ಎಲ್ಲರ ಬಳಿಯೂ ಆಧಾರ್ ಇರಲೇಬೇಕಾಗಿರುವುದರಿಂದ ಈ ಪ್ರಕ್ರಿಯೆಯನ್ನು ಇನ್ನಷ್ಟು ಜನಸ್ನೇಹಿ ಆಗಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರ ಈ ಉಪಕ್ರಮ ತೆಗೆದುಕೊಂಡಿದ್ದು, ಸಹರಾನ್ ಪುರ ಜಿಲ್ಲೆಯ ಅಂಚೆ ಕಚೇರಿಯಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ವಾರದ ಕೊನೆಯ ದಿನವಾದ ಶನಿವಾರದಂದು ಈ ಅಭಿಯಾನ ನಡೆಸಲಾಗುತ್ತದೆ ಎಂದು ಎಸ್ ಎಸ್ ಪಿ ಓ ನರಸಿಂಹ ತಿಳಿಸಿದರು.
ಬಿಬಿಎಂಪಿ ಅಧಿಕಾರಿ ದೇವೇಂದ್ರಪ್ಪಗೆ ಎಸಿಬಿ ಶಾಕ್; 400ಕ್ಕೂ ಹೆಚ್ಚು ಕಡತ, 120 ಲೀಟರ್ ಮದ್ಯ, ಕಂತೆ ಕಂತೆ ಹಣ ಪತ್ತೆ
ಜಿಲ್ಲೆಯ 23 ಕೇಂದ್ರಗಳನ್ನು ಇದಕ್ಕಾಗಿ ತೆರೆದಿದ್ದು, ಆಧಾರ್ ಕೇಂದ್ರಗಳು ಮಾತ್ರವಲ್ಲದೆ, ಅಂಚೆ ಕಚೇರಿಗಳೂ ನಿಮ್ಮ ನೆರವಿಗೆ ಬರಲಿವೆ. ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವಾಗ ಲೋಪದೋಷಗಳಾಗಿದ್ದರೂ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.