ದೇಶದಲ್ಲಿ ಕೊರೊನಾದ ಮತ್ತೊಂದು ಅಲೆ ಶುರುವಾದ ಬಳಿಕ ಬಾಲಿವುಡ್ ಸೆಲಿಬ್ರಿಟಿಗಳು ಒಬ್ಬರಾದ ಮೇಲೆ ಒಬ್ಬರಂತೆ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ.
ರಣಬೀರ್ ಕಪೂರ್, ಆಮೀರ್ ಖಾನ್, ಮಾಧವನ್, ಅಕ್ಷಯ್ ಕುಮಾರ್ ಹೀಗೆ ಸೋಂಕಿತ ಸೆಲಿಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಈ ಸಾಲಿಗೆ ಧಮ್ ಲಗಾಕೆ ಐಸಾ ಸಿನಿಮಾ ಖ್ಯಾತಿಯ ನಟಿ ಭೂಮಿ ಪೆಡ್ನೇಕರ್ ಕೂಡ ಸೇರಿದ್ದಾರೆ. ನಟಿ ಭೂಮಿ ತಾವು ಕೊರೊನಾ ಸೋಂಕಿಗೆ ಒಳಗಾಗಿರೋದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.
ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ನನಗೆ ಸೋಂಕಿನ ಸೌಮ್ಯ ಲಕ್ಷಣಗಳಿದ್ದು ಐಸೋಲೇಷನ್ನಲ್ಲಿ ಇದ್ದೇನೆ. ಆರೋಗ್ಯ ಇಲಾಖೆ ಹಾಗೂ ನನ್ನ ವೈದ್ಯರು ನೀಡಿರುವ ಎಲ್ಲಾ ಸೂಚನೆಗಳನ್ನ ನಾನು ಪಾಲಿಸುತ್ತಿದ್ದೇನೆ. ನನ್ನ ಜೊತೆ ಸಂಪರ್ಕಕ್ಕೆ ಬಂದವರು ಯಾರೇ ಇದ್ದರು ದಯಮಾಡಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ನಾನು ಸಾಕಷ್ಟು ಮುಂಜಾಗ್ರತೆಯನ್ನ ವಹಿಸಿದ ಬಳಿಕವೂ ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ಹೀಗಾಗಿ ಯಾರೂ ಸಹ ಈ ಸಂದರ್ಭವನ್ನ ಲಘುವಾಗಿ ಪರಿಗಣಿಸಬೇಡಿ. ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡೋದನ್ನ ಮರೆಯಬೇಡಿ ಎಂದು ಬರೆದುಕೊಂಡಿದ್ದಾರೆ.
https://www.instagram.com/p/CNRc8BsBe41/?utm_source=ig_web_copy_link