ವೇಶ್ಯಾವಾಟಿಕೆಗೆ ಇಳಿಯಲು ಪತ್ನಿ ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಪತಿ ಆಕೆಯ ಗುಪ್ತಾಂಗದ ಒಳಕ್ಕೆ ಮದ್ಯದ ಬಾಟಲಿಯನ್ನ ನೂಕಿದ ಅಮಾನವೀಯ ಘಟನೆ ಭುವನೇಶ್ವರದಲ್ಲಿ ನಡೆದಿದೆ.
ಆರೋಪಿ ಚಂದನ್ ಆಚಾರ್ಯ ಎಂಬಾತ ತನ್ನ ಪತ್ನಿ ಹಾಗೂ 5 ವರ್ಷದ ಮಗಳ ಜೊತೆ ಚಂದ್ರಶೇಖರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮಾವತಿ ವಿಹಾರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ . ವೃತ್ತಿಯಲ್ಲಿ ಈ ಆಟೋ ಡ್ರೈವರ್ ಆಗಿದ್ದ ಎನ್ನಲಾಗಿದೆ.
ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನಲ್ಲಿ, ಪತಿ ನನ್ನ ಆನ್ಲೈನ್ ವೇಶ್ಯಾವಾಟಿಕೆ ದಂಧೆಗೆ ಇಳಿಸಲು ಯತ್ನಿಸಿದ್ದು ಇದಕ್ಕೆ ನಾನು ನಿರಾಕರಿಸಿದೆ ಎಂಬ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದಿದ್ದಾಳೆ.
ಇದೇ ವಿಚಾರವಾಗಿ ನನ್ನ ಹಾಗೂ ಪತಿಯ ನಡುವೆ ವಾಗ್ವಾದ ನಡೆದಿದ್ದು ಆತ ನನ್ನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಮದ್ಯದ ಬಾಟಲಿಯನ್ನು ನನ್ನ ಗುಪ್ತಾಂಗದೊಳಕ್ಕೆ ಬಲವಂತದಿಂದ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾಳೆ.
ಪೊಲೀಸರು ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಆರೋಪಿ ಚಂದನ್ ಆಚಾರ್ಯ ವಿರುದ್ಧ ಐಪಿಸಿ ಸೆಕ್ಷನ್ 323, 498 ಎ ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ .