ಲಾಕ್ ಡೌನ್ ಕಾರಣ ಸಾಫ್ಟ್ವೇರ್ ಪತಿ ಕೆಲಸ ಕಳೆದುಕೊಂಡಿದ್ದಾನೆ. ಇದ್ರಿಂದಾಗಿ ಮಗನ ಶಾಲೆಯ ಶುಲ್ಕ ಪಾವತಿಸಲು ಆಗ್ಲಿಲ್ಲ. ಇದ್ರಿಂದ ಮುನಿಸಿಕೊಂಡ ಪತ್ನಿ ಮಗನ ಜೊತೆ ತವರು ಮನೆಗೆ ಹೋಗಿದ್ದಾಳೆ. ಪ್ರಕರಣ ಈಗ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದೆ. ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಮಗನ ಶಾಲೆಗೆ 30,000 ರೂಪಾಯಿ ಪಾವತಿ ಮಾಡಬೇಕಿತ್ತು. ಆದ್ರೆ ಶುಲ್ಕ ಪಾವತಿ ಮಾಡದ ಕಾರಣ ಆನ್‌ಲೈನ್ ತರಗತಿಯನ್ನು ತೆಗೆದುಕೊಳ್ತಿಲ್ಲ. ಪತಿಗೆ ಶುಲ್ಕ ಪಾವತಿಸುವಂತೆ ಪತ್ನಿ ಸಾಕಷ್ಟು ಬಾರಿ ಹೇಳಿದ್ದಳಂತೆ. ಆದ್ರೆ ಪತಿ ಹಣ ಪಾವತಿಸಲಿಲ್ಲವಂತೆ. ಹಾಗಾಗಿ ಮಗನ ಅಭ್ಯಾಸ ಅರ್ಧಕ್ಕೆ ನಿಂತಿದೆ ಎಂದು ಪತ್ನಿ ಆರೋಪ ಮಾಡಿದ್ದಾಳೆ. ತವರಿನವರ ಸಹಾಯ ಪಡೆಯಲು ಇಲ್ಲಿಗೆ ಬಂದಿದ್ದೇನೆ ಎಂದು ಪತ್ನಿ ಹೇಳಿದ್ದಾಳೆ.
ಏಪ್ರಿಲ್ ನಲ್ಲಿ ಪತಿಯ ಕೆಲಸ ಹೋಗಿದೆಯಂತೆ. ಈ ದಂಪತಿ ಮಾತ್ರವಲ್ಲ ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಕುಟುಂಬಗಳು ಆರ್ಥಿಕ ಮುಗ್ಗಟ್ಟು ಎದುರಿಸಿವೆ. ಇದು ದಂಪತಿ ಮಧ್ಯೆ ಬಿರುಕಿಗೆ ಕಾರಣವಾಗಿದೆ.