ಕೊರೊನಾ ವೈರಸ್ನಿಂದ ಬಚಾವಾಗೋಕೆ ಸಾಮಾಜಿಕ ಅಂತರ ಕಾಪಾಡೋದು ಅನಿವಾರ್ಯ ಅಂತಾ ಸರ್ಕಾರ ಜನತೆಗೆ ಎಚ್ಚರಿಕೆ ನೀಡುತ್ತಲೇ ಬರ್ತಿದೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ವ್ಯಕ್ತಿಯೊಬ್ಬ ಸಾಮಾಜಿಕ ಅಂತರ ಕಾಪಾಡಲು ಹೋಗಿ ಪುರುಷತ್ವ ಪರೀಕ್ಷೆಗೆ ಒಳಗಾದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಕೊರೊನಾ ಭೀತಿ ನಡುವೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವ್ಯಕ್ತಿ ಬಳಿಕ ಕೊರೊನಾ ಭಯದಿಂದಾಗಿ ತಮ್ಮ ಪತ್ನಿಯಿಂದಲೂ ದೂರವಿರಲು ಬಯಸಿದ್ದರು. ಆದರೆ ತನ್ನ ಪತಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಮಹಿಳೆ ತನ್ನ ತವರು ಮನೆಗೆ ವಾಪಸ್ಸಾಗಿದ್ದಾಳೆ.
ಆದರೆ ಈ ವಿಚಾರ ಇಲ್ಲಿಗೆ ನಿಂತಿಲ್ಲ. ತನಗಾದ ಅನ್ಯಾಯಕ್ಕೆ ಪತಿಯಿಂದ ಪರಿಹಾರ ಬೇಕೆಂದು ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ವಿಚಾರಣೆಗೆ ಹಾಜರಾದ ಪತಿ ನಾನು ಕೊರೊನಾಗೆ ಹೆದರಿ ಪತ್ನಿಯಿಂದ ಅಂತರ ಕಾಪಾಡಿದ್ದೆ ಅಂತಾ ಹೇಳಿದ್ದಾನೆ.
ಆದರೆ ಇದನ್ನ ಯಾರೂ ನಂಬದ ಕಾರಣ ಆತನನ್ನ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಯ್ತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ವ್ಯಕ್ತಿ ಪಾಸ್ ಆಗಿದ್ದಾನೆ.