ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೊರೊನಾ ಗೆದ್ದು ಬಂದಿದ್ದಾರೆ. 10 ದಿನಗಳ ನಂತ್ರ ಶಿವರಾಜ್ ಸಿಂಗ್ ಕೊರೊನಾ ಗೆದ್ದಿದ್ದಾರೆ. ಸಿಎಂ ಶಿವರಾಜ್ ಸಿಂಗ್ ಅವರ ಕೊರೊನಾ ಪರೀಕ್ಷೆ ನಕಾರಾತ್ಮಕವಾಗಿದೆ. ಇದರ ನಂತರ ಅವರನ್ನು ರಾಜಧಾನಿ ಭೋಪಾಲ್‌ನ ವಿವಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕಳೆದ ಜುಲೈ 25 ರಂದು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದರ ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. 7 ದಿನಗಳ ಕಾಲ ಅವರು ಮನೆಯವರಿಂದ ದೂರವಿರಲಿದ್ದಾರೆ.
ಕೊರೊನಾ ಗೆದ್ದ ನಂತ್ರ ಸಿಎಂ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಕೊರೊನಾಕ್ಕೆ ಭಯಪಡುವ ಅಗತ್ಯವಿಲ್ಲ. ನಿರ್ಲಕ್ಷ್ಯ ಮಾಡಿದ್ರೆ ಕೊರೊನಾ ಮಾರಕವಾಗಲಿದೆ. ರೋಗಲಕ್ಷಣಗಳನ್ನು ಮರೆಮಾಚಬೇಕಾಗಿಲ್ಲ. ಚಿಂತಿಸಬೇಡಿ. ಆರಾಮವಾಗಿರಿ. ರೋಗವನ್ನು ಸಂತೋಷದಿಂದ ಎದುರಿಸಿ. ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಅವರು ಹೇಳಿದ್ದಾರೆ.