ಭೋಪಾಲ್‌ನ ಪೀಪಲ್ಸ್ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 12 ರಂದು ಕೊರೊನಾ ಪ್ರಯೋಗ ಲಸಿಕೆ ಪಡೆದಿದ್ದ 47 ವರ್ಷದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ. ದೀಪಕ್ ಮರಾವಿ ಡಿಸೆಂಬರ್ 21 ರಂದು ಸಾವನ್ನಪ್ಪಿದ್ದಾನೆ. ಆತನ ಸಾವು ಈಗ ಚರ್ಚೆಗೆ ಕಾರಣವಾಗಿದೆ.
ಜಮಾಲ್‌ಪುರದ ಸುಬೇದಾರ್ ಕಾಲೋನಿಯಲ್ಲಿರುವ ಆತನ ಮನೆಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 22ರಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ದೇಹದಲ್ಲಿ ವಿಷವಿರುವುದು ಪತ್ತೆಯಾಗಿದೆ. ಆದ್ರೆ ಅಂತಿಮ ವರದಿ ನಂತ್ರವೇ ಕಾರಣ ತಿಳಿಯಬೇಕಿದೆ. ದೀಪಕ್ ಕೊವಾಕ್ಸಿನ್ ಲಸಿಕೆಯನ್ನು ಪಡೆದಿದ್ದ ಎನ್ನಲಾಗಿದೆ.
ಲಸಿಕೆ ಪಡೆದ ನಂತ್ರ ದೀಪಕ್ ಕೆಲಸಕ್ಕೆ ಹೋಗಿರಲಿಲ್ಲ. ಪ್ರೋಟೋಕಾಲ್ ಪಾಲನೆ ಮಾಡ್ತಿದ್ದರು. ದೀಪಕ್ ಗೆ ಇದ್ದಕ್ಕಿದ್ದಂತೆ ಭಯ, ಹೆದರಿಕೆ, ವಾಕರಿಕೆ ಕಾಣಿಸಿಕೊಂಡಿತ್ತು ಎಂದು ದೀಪಕ್ ಮಗ ಹೇಳಿದ್ದಾನೆ. ಡಿಸೆಂಬರ್ 19ರಂದು ದೀಪಕ್ ಆರೋಗ್ಯ ಹದಗೆಟ್ಟಿತ್ತು. 21ರಂದು ಸಾವನ್ನಪ್ಪಿದ್ದಾನೆ. ಸಾವಿನ ಸಂದರ್ಭದಲ್ಲಿ ಆತ ಮನೆಯಲ್ಲಿ ಒಂಟಿಯಾಗಿದ್ದ. ಡೋಸ್ ಬಗ್ಗೆ ಮಾಹಿತಿ ಪಡೆಯಲು ಆಸ್ಪತ್ರೆಯಿಂದ ಕರೆ ಬರ್ತಿತ್ತಂತೆ. ಆದ್ರೆ ದೀಪಕ್ ಕರೆ ಸ್ವೀಕರಿಸಿರಲಿಲ್ಲವಂತೆ.