alex Certify ಕುಡುಕ ತಂದೆಯನ್ನು ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿ ಶರಣಾದ 16 ವರ್ಷದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡುಕ ತಂದೆಯನ್ನು ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿ ಶರಣಾದ 16 ವರ್ಷದ ಬಾಲಕಿ

ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದ ತಂದೆಯ ಕ್ರೂರತ್ವವನ್ನ ಸಹಿಸಲಾಗದ 16 ವರ್ಷದ ಮಗಳು ತಂದೆಯನ್ನ ಹೊಡೆದು ಸಾಯಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ.

ತಾಯಿಗೆ ನಿತ್ಯ ಪಾನಮತ್ತನಾಗಿ ಬಂದು ಕಿರುಕುಳ ನೀಡ್ತಿದ್ದನ್ನು ನೋಡಲಾಗದೇ ಅಪ್ರಾಪ್ತೆ ಈ ಕೆಲಸ ಮಾಡಿದ್ದಾಳೆ. ಕಬ್ಬಿಣದ ರಿಂಗ್​ಗಳನ್ನ ಹೊಂದಿದ್ದ ಬ್ಯಾಟ್​ನಲ್ಲಿ ತಂದೆಗೆ ಹೊಡೆದು ಸಾಯಿಸಿದ್ದಾಳೆ. ಕೊಲೆಯ ಬಳಿಕ ಖುದ್ದು ಪೊಲೀಸರಿಗೆ ಕರೆ ಮಾಡಿದ ಬಾಲಕಿ ತಾನು ಮಾಡಿದ ಕೃತ್ಯವನ್ನ ಒಪ್ಪಿಕೊಂಡಿದ್ದಾಳೆ.

ಕುಡುಕ ತಂದೆ ನಿರುದ್ಯೋಗಿಯಾಗಿದ್ದ. ಹೀಗಾಗಿ ಮದ್ಯ ಖರೀದಿಸಲು ಹಣ ಬೇಕು ಅಂತಾ ಪ್ರತಿದಿನ ಪತ್ನಿಗೆ ಥಳಿಸುತ್ತಿದ್ದ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ದಿನ ಮನೆಯಲ್ಲಿ ಹಿರಿಯ ಮಗನ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಕುಡುಕ ತಂದೆ ಜಗಳವಾಡಲು ಆರಂಭಿಸಿದ್ದಾನೆ . ಇದರಿಂದ ಕೋಪಗೊಂಡ ಮಗಳು ಬ್ಯಾಟ್​ ಎತ್ತಿ ತಂದೆಯ ತಲೆಗೆ ಬಾರಿಸಿದ್ದಾಳೆ. ತಲೆಯಿಂದ ತೀವ್ರ ರಕ್ತಸ್ರಾವವಾದ ಕಾರಣ ಕುಡುಕ ತಂದೆ ಮೃತಪಟ್ಟಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...