ಬಿಜೆಪಿ ಸ್ಥಳೀಯ ನಾಯಕನ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಭೋಜ್ಪುರಿ ಗಾಯಕ ಹಾಗೂ ನಟ ಗೋಲು ರಾಜರಿಗೆ ಅಚಾನಕ್ಕಾಗಿ ಗುಂಡು ತಾಕಿದೆ.
ಉತ್ತರ ಪ್ರದೇಶದ ಮಹಾಕರ್ಪೂರ್ ಹಳ್ಳಿಯಲ್ಲಿ ಬಿಜೆಪಿ ಸ್ಥಳೀಯ ನಾಯಕ ಭಾನು ದುಬೆ ಪುತ್ರನ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಗಾಯಕ ಗೋಲುರಾಜ ಸಹ ಭಾಗಿಯಾಗಿದ್ರು. ಆದರೆ ಸಂಭ್ರಮದ ಮಸ್ತಿಯಲ್ಲಿ ಸಿಡಿಸಿದ ಗುಂಡೊಂದು ಅಚಾನಕ್ಕಾಗಿ ಗೋಲುರಾಜರಿಗೆ ತಾಕಿದೆ.
ಫೈರಿಂಗ್ನಿಂದಾಗಿ ಗೋಲು ರಾಜ ಗಾಯಗೊಂಡಿದ್ದು ಬುಕ್ಸಾರ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಾರಣಾಸಿಗೆ ಶಿಫ್ಟ್ ಮಾಡಲಾಗಿದೆ ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.