ಟೈಮ್ ನಿಯತಕಾಲಿಕೆಯ ’ಭವಿಷ್ಯ ರೂಪಿಸುತ್ತಿರುವ 100 ಉದಯೋನ್ಮುಖ ನಾಯಕರು’ ಪಟ್ಟಿಯಲ್ಲಿ ಭಾರತದ ಮೂಲದ ಆರು ಮಂದಿ ಸ್ಥಾನ ಪಡೆದಿದ್ದಾರೆ.
ಟ್ವಿಟರ್ ವಕೀಲೆ ವಿಜಯಾ ಗಡ್ಡೆ, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್, ಬ್ರಿಟನ್ನ ವಿತ್ತ ಸಚಿವ ರಿಶಿ ಸುನಕ್, ಅಪ್ಸಾಲ್ವ್ ಸಂಸ್ಥಾಪಕ ರೋಹನ್ ಪವುಲುರಿ, ಇನ್ಸ್ಟಾಕಾರ್ಟ್ ಸ್ಥಾಪಕ ಹಾಗೂ ಸಿಇಓ ಅಪೂರ್ವ ಮೆಹ್ತಾ ಹಾಗೂ ಗೆಟ್ ಅಸ್ ಪಿಪಿಇ ಸ್ಥಾಪಕಿ ಶಿಖಾ ಗುಪ್ತಾ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಇದ್ದಾರೆ.
ಮೀಸಲಾತಿ ಹೋರಾಟನಿರತರಿಗೆ ಸಿಹಿ ಸುದ್ದಿ, ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ
ಉತ್ತರ ಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ಯುವತಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರದ ವಿಚಾರದಲ್ಲಿ ನ್ಯಾಯಕ್ಕಾಗಿ ಚಂದ್ರಶೇಖರ್ ಆಜಾದ್ ಬಹಳ ಹೋರಾಡಿದ್ದಾರೆ ಎಂದು ಟೈಮ್ ತಿಳಿಸಿದ್ದು, ದಲಿತ ವಿದ್ಯಾರ್ಥಿಗಳು ಬಡತನದಿಂದ ಮೇಲೆ ಬರಲು ಶಿಕ್ಷಣ ಪಡೆಯಲು ನೆರವಾಗಲು 34 ವರ್ಷ ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ.