ಯೋಗಗುರು ರಾಮದೇವ್ ಅವರು ಕೋವಿಡ್ 19 ವಿರುದ್ಧ ಔಷಧ ಹೊರತಂದಿರುವುದಾಗಿ ಹೇಳಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಸೃಷ್ಟಿಸಿದೆ.
ಇದೇ ವೇಳೆ ಪಂತಜಲಿ ಹೊರತಂದ ಔಷಧದ ಬಗ್ಗೆ ಟೀಕೆ ಟಿಪ್ಪಣಿಯೂ ಕೇಳಿಬಂದಿದೆ. ವಿನು ಜೋಸೆಫ್ ಎಂಬುವರು ವಿಡಂಬನೆ ಮಾಡುವ ಎನಿಮೇಟೆಡ್ ವಿಡಿಯೋ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.
ಆ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಪತಂಜಲಿ ಅಂಗಡಿಯೊಂದಕ್ಕೆ ಹೋಗಿ ಕೊರೋನ ವೈರಸ್ ಮೆಡಿಸಿನ್ ಔಷಧಿ ಕೇಳುತ್ತಾನೆ. ಬಳಿಕ ಔಷಧಿಯನ್ನು ನಂಬಬಹುದೇ ಎಂದು ಅಂಗಡಿಯವರನ್ನು ಪ್ರಶ್ನಿಸುತ್ತಾನೆ, ಇದಕ್ಕೆ ಪ್ರತಿಯಾಗಿ ಅಂಗಡಿಯವನು ಔಷಧಿ ಹಸುಗಳ ಮೇಲೆ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ ಎನ್ನುತ್ತಾನೆ.
ಕೊನೆಗೆ ಆ ಗ್ರಾಹಕ, ಅದನ್ನು ಬಿಡಿ ಪ್ಯಾರಾಸಿಟಮಲ್ ಸಾಕು ಎಂದು ಅಂಗಡಿಯಿಂದ ಹೊರಟುಬಿಡುತ್ತಾನೆ. ಜೊತೆಗೆ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದು, ಆಯುರ್ವೇದವನ್ನು ಬೆಂಬಲಿಸಿ, ಸುಳ್ಳು ಸಮರ್ಥನೆಗಳನ್ನಲ್ಲ ಎಂದು ಕುಟುಕಿದ್ದಾರೆ.
https://www.facebook.com/rexvinucaptures/videos/827092807698427